ಗುಜರಾತ್: ಟ್ರಕ್ ಹರಿದು 13 ಮಂದಿ ವಲಸೆ ಕಾರ್ಮಿಕರ ಸಾವು

ಸೂರತ್: ಟ್ರಕ್ ಹರಿದು 13 ಮಂದಿ ಸಾವಿಗೀಡಾಗಿರುವ ದುರ್ಘಟನೆ ಗುಜರಾತ್‌ನ ಕೋಸಂಬಾದಲ್ಲಿ ಸಂಭವಿಸಿದೆ.
'ಮೃತಪಟ್ಟಿರುವ ಎಲ್ಲರೂ ರಾಜಸ್ಥಾನದಿಂದ ಬಂದಿದ್ದ ವಲಸೆ ಕಾರ್ಮಿಕರು' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ಕಾರ್ಮಿಕರು ಫೂಟ್‌ಪಾತ್ ಮೇಲೆ ನಿದ್ರೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಕಾರ್ಮಿಕರೆಲ್ಲರೂ ರಾಜಸ್ಥಾನದ ಬಾಂಸ್ವಾಡಾ ಮೂಲದವರೆಂದು ವರದಿಯಾಗಿದೆ.
ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿರುವ ಕಬ್ಬು ತುಂಬಿದ್ದ ಟ್ರಕ್, ಚಾಲಕನ ನಿಯಂತ್ರಣಕ್ಕೆ ಸಿಗದೆ ಫೂಟ್‌ಪಾತ್ ಮೇಲೆ ಸಾಗಿದೆ. ಅಲ್ಲಿ ಮಲಗಿದ್ದವರ ಪೈಕಿ 13 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Gujarat: 13 people died after they were run over by a truck in Kosamba, Surat.
Police says, "All the deceased are labourers and they hail from Rajasthan." pic.twitter.com/E9uwZnrgeO
— ANI (@ANI) January 19, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.