ಮಂಗಳವಾರ, ಜೂನ್ 22, 2021
29 °C

ಗುಜರಾತ್: ಸಿಂಹ ದಾಳಿ, ವ್ಯಕ್ತಿ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಜುನಾಘಡ್: ಗುಜರಾತಿನ ಜುನಾಗಡ ಜಿಲ್ಲೆಯ ಮಧುಪುರ ಗ್ರಾಮದಲ್ಲಿ ಸಿಂಹ ದಾಳಿ ನಡೆಸಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬಹಾದ್ದೂರ್‌ಬಾಯಿ ಜೀವಭಾಯಿ (35) ಎಂಬುವವರು ಮಾವಿನ ತೋಟದ ಗುಡಿಸಲಿನ ಹೊರಗೆ ಮಲಗಿದ್ದರು. ಶುಕ್ರವಾರ ಮಧ್ಯರಾತ್ರಿ 1ರ ವೇಳೆಗೆ ಸಿಂಹವೊಂದು ಅಲ್ಲಿಯೇ ಕಟ್ಟಿಹಾಕಿದ್ದ ಮೇಕೆಯ ಮೇಲೆ ದಾಳಿ ಮಾಡಲು ಯತ್ನಿಸಿತು. ಈ ವೇಳೆ ಎಚ್ಚರಗೊಂಡ ಅವರು ಮೇಕೆಯನ್ನು ರಕ್ಷಿಸಲು ಮುಂದಾದಾಗ ಸಿಂಹ  ದಾಳಿ ನಡೆಸಿ ಕೊಂದು ಹಾಕಿತು ಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದುಷ್ಯಂತ್ ವಾಸವಾಡ ತಿಳಿಸಿದ್ದಾರೆ.

ಘಟನೆಯ ನಂತರ ಅರಣ್ಯ ಇಲಾಖೆ ತಂಡವು ಸಿಂಹವನ್ನು ಸೆರೆ ಹಿಡಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು