ಬುಧವಾರ, ಸೆಪ್ಟೆಂಬರ್ 22, 2021
29 °C

ಧರ್ಮ ಪ್ರಚಾರಕ್ಕೆ ವೇದಿಕೆ ಬಳಕೆ: ಐಎಂಎ ಅಧ್ಯಕ್ಷರ ಅರ್ಜಿ ವಜಾಮಾಡಿದ ದೆಹಲಿ ಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯಾವುದೇ ಧರ್ಮದ ಪ್ರಚಾರಕ್ಕಾಗಿ ಭಾರತೀಯ ವೈದ್ಯಕೀಯ ಒಕ್ಕೂಟದ (ಐಎಂಎ) ವೇದಿಕೆ ಬಳಸಿಕೊಳ್ಳಬಾರದೆಂದು ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಐಎಂಎ ಅಧ್ಯಕ್ಷ ಜೆ.ಎ.ಜಯಲಾಲ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಅರ್ಜಿ ವಜಾಗೊಳಿಸಿ ಆದೇಶಿಸುವ ಸಂದರ್ಭದಲ್ಲಿ ‘ಒಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗಳಿಂದ ಇಂಥ ಅಸಂಬದ್ಧವಾದ ಹೇಳಿಕೆಗಳನ್ನು ನ್ಯಾಯಾಲಯ ನಿರೀಕ್ಷಿಸುವುದಿಲ್ಲ‘ ಎಂದು ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಜೂನ್ ತಿಂಗಳಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಐಎಎಂ ಅಧ್ಯಕ್ಷ ಜಯಲಾಲ್‌ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಹೈಕೋರ್ಟ್‌ ನೋಟಿಸ್‌ ನೀಡಿತ್ತು.

‘ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವುದಕ್ಕಾಗಿ ಐಎಂಎ ಅಧ್ಯಕ್ಷ ಜಯಲಾಲ್ ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದೇಶ ಮತ್ತು ದೇಶದ ನಾಗರಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ರೋಹಿತ್ ಝಾ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಜಯಲಾಲ್ ಅವರ ಸಂದರ್ಶನ ಹಾಗೂ ಬರೆದ ಲೇಖನಗಳು ಹಾಗೂ ಅವರು ಹಿಂದೂಧರ್ಮ ಅಥವಾ ಆಯುರ್ವೇದಕ್ಕೆ ಮಾನಹಾನಿ ಆಗುವಂತ ವಿಚಾರಗಳನ್ನು ಪ್ರಕಟಿಸದಂತೆ ಹಾಗೂ ಭಾಷಣ ಮಾಡದಂತೆ ತಡೆ ನೀಡುವಂತೆ ಕೋರಿ ನ್ಯಾಯಾಲಯದ ನಿರ್ದೇಶನ ಕೋರಿದ್ದನ್ನು ದೂರುದಾರರು ಲಗತ್ತಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು