ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಹೆಖಾನಿ ಜಖಲು

Last Updated 2 ಮಾರ್ಚ್ 2023, 11:43 IST
ಅಕ್ಷರ ಗಾತ್ರ

ಕೊಹಿಮಾ: ನ್ಯಾಷನಲ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್‌ಡಿಪಿಪಿ) ಪಕ್ಷದ ಹೆಖಾನಿ ಜಖಲು ಅವರು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಅವರು, ಶಾಸಕಿಯಾಗಿ ಚುನಾಯಿತರಾದ ರಾಜ್ಯದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ದಿಮಾಪುರ್‌–3 ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅವರು ತಮ್ಮ ಸಮೀಪದ ಸ್ಪರ್ಧಿ ಲೋಕ ಜನಶಕ್ತಿ ಪಾರ್ಟಿಯ (ರಾಮ್‌ ವಿಲಾಸ್‌) ಅಝೆಟೊ ಝಿಮೊಮಿ ಅವರೆದುರು 1,536 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಬಾರಿ ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಗೆ ಹೆಖಾನಿ ಜಖಲು ಅವರಲ್ಲದೆ, ಸಲ್ಹೌಟೊ ಕೃಸೆ, ಹುಕಾಲಿ ಸೆಮಾ ಮತ್ತು ರೋಸಿ ಥಾಂಪ್ಸನ್‌ ಕಣಕ್ಕಿಳಿದಿದ್ದರು.

ಎನ್‌ಡಿಪಿಪಿಯ ಸಲ್ಹೌಟೊ ಹಾಗೂ ಬಿಜೆಪಿಯ ಹುಕಾಲಿ ಸೆಮಾ ಅವರು ಸ್ಪರ್ಧಿಸಿರುವ ಅಂಗಾಮಿ ಪಶ್ಚಿಮ ಮತ್ತು ಅಟೋಯಿಝು ಕ್ಷೇತ್ರಗಳ ಮತ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ. ಇವರಿಬ್ಬರೂ ಸದ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಆಯೋಗ ಹೇಳಿದೆ.

60 ಸದಸ್ಯ ಬಲದ ನಾಗಾಲ್ಯಾಂಡ್‌ ವಿಧಾನಸಭೆಯ 59 ಕ್ಷೇತ್ರಗಳಿಗೆ ಸೋಮವಾರ (ಫೆಬ್ರುವರಿ 27 ರಂದು) ಮತದಾನ ನಡೆದಿತ್ತು. ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT