ಬುಧವಾರ, ಅಕ್ಟೋಬರ್ 28, 2020
25 °C

ಎರಡು ವಾರ ಏರ್‌ ಇಂಡಿಯಾ ನಿರ್ಬಂಧಿಸಿದ ಹಾಂಗ್‌ಕಾಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೆಲ ಪ್ರಯಾಣಿಕರಲ್ಲಿ ಕೋವಿಡ್‌–19 ದೃಢಪಟ್ಟ ಕಾರಣ ಭಾನುವಾರದಿಂದ ಅ.3ರವರೆಗೆ ಏರ್‌ ಇಂಡಿಯಾ ವಿಮಾನಗಳಿಗೆ ಹಾಂಗ್‌ಕಾಂಗ್‌ ನಿರ್ಬಂಧ ಹೇರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು. 

ಹಾಂಗ್‌ಕಾಂಗ್‌ ಸರ್ಕಾರ ಜುಲೈನಲ್ಲಿ ಹೊರಡಿಸಿರುವ ನಿಯಮದಂತೆ, ಕೋವಿಡ್‌–19 ನೆಗೆಟಿವ್‌ ವರದಿ ಇದ್ದರಷ್ಟೇ  ಭಾರತದ ಪ್ರಯಾಣಿಕರಿಗೆ ಹಾಂಗ್‌ಕಾಂಗ್‌ಗೆ ಆಗಮಿಸಲು ಅವಕಾಶವಿದೆ. ಪ್ರಯಾಣಕ್ಕೂ 72 ಗಂಟೆ ಮೊದಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ವರದಿ ತರುವುದು ಕಡ್ಡಾಯವಾಗಿತ್ತು. ಹಾಂಗ್‌ಕಾಂಗ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರವೂ, ಅವರು ಕೋವಿಡ್‌–19 ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ. 

‘ಎರಡು ವಾರಗಳ ಕಾಲ ಏರ್‌ ಇಂಡಿಯಾ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ ಸೆ.21ರಂದು ಕೇವಲ ಒಂದು ವಿಮಾನವಷ್ಟೇ ಹಾಂಗ್‌ಕಾಂಗ್‌ಗೆ ಹೋಗಬೇಕಿತ್ತು. ಇದನ್ನು ರದ್ದುಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ’ ಎಂದು ಏರ್‌ ಇಂಡಿಯಾ ವಕ್ತಾರರೊಬ್ಬರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು