ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ತಾರ್‌ ಅನ್ಸಾರಿ ಮಕ್ಕಳಿಗೆ ಸೇರಿದ ಮನೆ ನೆಲಸಮ

Last Updated 4 ಮಾರ್ಚ್ 2023, 16:06 IST
ಅಕ್ಷರ ಗಾತ್ರ

ಮೌ, ಉತ್ತರಪ್ರದೇಶ (ಪಿಟಿಐ): ‘ರಾಜಕಾರಣಿ ಹಾಗೂ ಜೈಲಿನಲ್ಲಿರುವ ಪಾತಕಿ ಮುಖ್ತಾರ್‌ ಅನ್ಸಾರಿ ಅವರ ಮಕ್ಕಳಿಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಅಧಿಕಾರಿಗಳು ಶನಿವಾರ ನೆಲಸಮಗೊಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅಬ್ಬಾಸ್‌ ಹಾಗೂ ಉಮರ್‌ ಅನ್ಸಾರಿ ಅವರಿಗೆ ಸೇರಿದ ಎರಡು ಅಂತಸ್ತಿನ ಮನೆ ನೆಲಸಮಗೊಳಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆದೇಶಿಸಿದ್ದರು. ಶುಕ್ರವಾರ ನೆಲಸಮ ಕಾರ್ಯ ಆರಂಭಿಸಲಾಗಿತ್ತು. ಶನಿವಾರ ಇದು ಪೂರ್ಣಗೊಂಡಿದೆ’ ಎಂದು ವಲಯ ಅಧಿಕಾರಿ ಅಭಯ್‌ ಸಿಂಗ್‌ ಹೇಳಿದ್ದಾರೆ.

‘ಬೇರೊಬ್ಬರಿಗೆ ಸೇರಿದ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗಿತ್ತು. ಕಟ್ಟಡದ ನಕಾಶೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಪಡೆದಿರಲಿಲ್ಲ’ ಎಂದಿದ್ದಾರೆ.

ಅಬ್ಬಾಸ್‌ ಅನ್ಸಾರಿ ಅವರು ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಶಾಸಕರಾಗಿದ್ದು, ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಜೈಲು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT