ಶನಿವಾರ, ಮೇ 28, 2022
26 °C

ಅಂತರ್‌ಧರ್ಮೀಯ ವಿವಾಹ: ವ್ಯಕ್ತಿ ‘ಮರ್ಯಾದೆಗೇಡು ಹತ್ಯೆ’ ಶಂಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತಂಗಿಯು ಅನ್ಯಧರ್ಮೀಯ ವ್ಯಕ್ತಿಯನ್ನು ವಿವಾಹವಾಗಿರುವುದನ್ನು ವಿರೋಧಿಸಿದ ಸ್ವಂತ ಅಣ್ಣ, ಆಕೆಯ ಪತಿಯನ್ನು (ಅಂತರ್‌ಧರ್ಮೀಯ ವ್ಯಕ್ತಿಯನ್ನು) ಬರ್ಬರವಾಗಿ ‘ಮರ್ಯಾದೆಗೇಡು ಹತ್ಯೆ’ ಮಾಡಿರುವ ಶಂಕಿತ ಪ್ರಕರಣ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರೂರ್‌ನಗರದಲ್ಲಿ ಈ ಘಟನೆ ಬುಧವಾರ ರಾತ್ರಿ ನಡೆದಿದೆ. ಸುಮಾರು 20ರ ಹರೆಯದ ವ್ಯಕ್ತಿ ತನ್ನ ಪತ್ನಿ ಜತೆಗೆ ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ, ಮಹಿಳೆಯ ಅಣ್ಣ ಮತ್ತು ಆತನ ಸಂಬಂಧಿಕರು ರಸ್ತೆಯಲ್ಲಿ ಸ್ಕೂಟರ್‌ ಅಡ್ಡಗಟ್ಟಿ ಸಾರ್ವಜನಿಕರ ಸಮ್ಮುಖದಲ್ಲೇ ಆತನಿಗೆ ಚಾಕುವಿನಿಂದ ಇರಿದು, ಕಬ್ಬಿಣದ ಸರಳಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪ‍ಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಾವಿಬ್ಬರು ಅನ್ಯಧರ್ಮಗಳಿಗೆ ಸೇರಿದ್ದು, ನಮಗೆ 11 ವರ್ಷಗಳಿಂದ ಪರಿಚಯವಿತ್ತು. ಪರಸ್ಪರ ಪ್ರೀತಿಸುತ್ತಿದ್ದೆವು. ಇದೇ ವರ್ಷದ ಜನವರಿಯಲ್ಲಿ ವಿವಾಹ ಮಾಡಿಕೊಂಡಿದ್ದೆವು. ನಮ್ಮ ಮದುವೆ ವಿರೋಧಿಸಿ ಐವರು ನನ್ನ ಪತಿ ಮೇಲೆ ದಾಳಿ ನಡೆಸಿದರು’ ಎಂದು ಮಹಿಳೆ ಟಿ.ವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ತಂದೆ, ‘ನನ್ನ ಸೊಸೆಯ ಅಣ್ಣ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ’ ಎಂದು ದೂರು ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಮಹಿಳೆಯ ಅಣ್ಣ ಮತ್ತು ಆತನ ಸಂಬಂಧಿಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಪಿ ಪಿ.ಶ್ರೀಧರ ರೆಡ್ಡಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು