ಬುಧವಾರ, ಸೆಪ್ಟೆಂಬರ್ 22, 2021
24 °C

ಒಡಿಶಾ: ಬಿಎಸ್‌ಎಫ್‌ನ ನಕ್ಸಲ್‌ ನಿಗ್ರಹ ಪಡೆಯಿಂದ ಧ್ವಜಾರೋಹಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಲ್ಕನ್‌ಗಿರಿ: ಒಡಿಶಾದ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ನೆಲೆಯೊಂದರಲ್ಲಿ ಇದೇ ಮೊದಲ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ವಿಶೇಷ ನಕ್ಸಲ್ ನಿಗ್ರಹ ಕಾರ್ಯಾಚರಣೆ ತಂಡವು ಭಾನುವಾರ ಧ್ವಜಾರೋಹಣ ನೆರವೇರಿಸಿದೆ.

ಒಡಿಶಾ–ಛತ್ತೀಸಗಢ ಗಡಿ ಬಳಿಯ ದಟ್ಟವಾದ ಕಾಡಿನಲ್ಲಿ ಮೊಹುಪದಾರ್‌ ಪ್ರದೇಶದಲ್ಲಿ ಬಿಎಸ್‌ಎಫ್‌ನ ‘ಕಂಪನಿ ಆಪರೇಟಿಂಗ್‌ ಬೇಸ್‌’(ಸಿಒಬಿ) ಅನ್ನು ನಿರ್ಮಿಸಲಾಗಿದೆ. ಇದು ಜಿಲ್ಲಾ ಮುಖ್ಯ ಕಚೇರಿಯಿಂದ 90 ಕಿಲೋ ಮೀಟರ್‌ ದೂರದಲ್ಲಿದೆ. ಇಲ್ಲಿ 160ನೇ ಬಿಎಸ್‌ಎಫ್‌ ಬೆಟಾಲಿಯನ್ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಹಿಡಿತವನ್ನು ವಿಸ್ತರಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಏಕಕಾಲದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಈ ನೆಲೆಯನ್ನು ನಿರ್ಮಿಸಲಾಗಿದೆ.

‘ಈ ನೆಲೆಯಲ್ಲಿ ಇದೇ ಮೊದಲ ಬಾರಿ ಧ್ವಜಾರೋಹಣವನ್ನು ಮಾಡಲಾಗಿದ್ದು,  ಬಿಎಸ್‌ಎಫ್‌ ಡಿಐಜಿ ಎಸ್‌.ಕೆ ಸಿಂಗ್‌, 160ನೇ ಬಿಎಸ್‌ಎಫ್‌ ಬೆಟಾಲಿಯನ್‌ ಕಮಾಂಡರ್‌ ತೀರ್ಥ ಆಚಾರ್ಯ, ಗ್ರಾಮದ ಮುಖಂಡರು, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ಮೊಹುಪದಾರ್‌ ಪ್ರದೇಶದಲ್ಲಿ ಹಲವು ಬಾರಿ ನಕ್ಸಲ್‌ ಹಿಂಸಾಚಾರಗಳು ನಡೆದಿವೆ. ಶಾಲೆಗಳು ಪಂಚಾಯಿತಿ ಕಟ್ಟಡಗಳನ್ನು ನಾಶಪಡಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಪೊಲೀಸ್‌ ಠಾಣೆಯ ಮೇಲೆಯೂ ದಾಳಿ ನಡೆದಿದೆ. ಭದ್ರತಾ ಪಡೆಗಳ ಮೇಲೆಯೂ ದಾಳಿಗಳು ನಡೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು