ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಸಮಸ್ಯೆ ಪರಿಹರಿಸಿದ್ದೇನೆ: ಮೋದಿ

Last Updated 10 ಅಕ್ಟೋಬರ್ 2022, 19:32 IST
ಅಕ್ಷರ ಗಾತ್ರ

ಆಣಂದ್‌ : ಸರ್ದಾರ್ ವಲ್ಲಭಭಾಯ್‌ ಪಟೇಲ್‌ ಅವರು ರಾಜ ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನ ಮಾಡುವಲ್ಲಿ ಯಶಸ್ವಿಯಾದರು. ಆದರೆ, ‘ಒಬ್ಬ ವ್ಯಕ್ತಿ’ಗೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ. ಈ ಮೂಲಕ ಅವರು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ದೇಶದ ಮೊದಲ ಗೃಹ ಸಚಿವ ಸರ್ದಾರ್‌ ಪಟೇಲ್‌ ಅವರ ಮಾರ್ಗ ಅನುಸರಿಸುತ್ತಿರುವ ತಾವು, ಸುದೀರ್ಘ ಕಾಲದ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿರುವುದಾಗಿ ಮೋದಿ ಹೇಳಿಕೊಂಡಿದ್ದಾರೆ. ಕೆಲವೇ ವಾರಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಗುಜರಾತ್‌ನ ಆಣಂದ್‌ನಲ್ಲಿ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

ಸರ್ದಾರ್ ಸರೋವರ ಅಣೆಕಟ್ಟೆ ಯೋಜನೆಯನ್ನು ತಡೆಯಲು ‘ನಗರ ನಕ್ಸಲರು’ ಯತ್ನಿಸಿದ್ದರು ಎಂದೂ ಮೋದಿ ಆರೋಪಿಸಿದ್ದಾರೆ. ನಕ್ಸಲರು ಪ್ರತಿಪಾದಿಸುವ ವಿಚಾರಗಳ ಬಗ್ಗೆ ಸಹಾನುಭೂತಿ ಇರುವವರು ಮತ್ತು ನಿರ್ದಿಷ್ಟ ರೀತಿಯ ಸಾಮಾಜಿಕ ಹೋರಾಟಗಾರರನ್ನು ಬಣ್ಣಿಸಲು ಬಿಜೆಪಿಯು ‘ನಗರ ನಕ್ಸಲ್‌’ ಎಂಬ ಹೆಸರನ್ನು ಬಳಸುತ್ತಿದೆ.

‘ಸರ್ದಾರ್‌ ಪಟೇಲರ ಹಾದಿಯಲ್ಲಿ ಸಾಗುತ್ತಿರುವ ನಾನು ಸರ್ದಾರ್‌ ಅವರ ನಾಡಿನ ಮೌಲ್ಯಗಳನ್ನು ಹೊಂದಿದ್ದೇನೆ. ಆ ಕಾರಣದಿಂದಾಗಿಯೇ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿ ಪಟೇಲ್‌ ಅವರಿಗೆ ನಮನ ಸಲ್ಲಿಸಿದ್ದೇನೆ’ ಎಂದು ಮೋದಿ ಹೇಳಿದರು. ಗುಜರಾತ್‌ನಲ್ಲಿ ಈ ಹಿಂದೆ ಆಳಿದ್ದ ಕಾಂಗ್ರೆಸ್‌ ಸರ್ಕಾರಗಳನ್ನೂ ಅವರು ಟೀಕಿಸಿದರು. ಅವರು ಅಣೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಆದರೆ, ನೀರು ಹರಿಸಲು ಕಾಲುವೆ ಕಟ್ಟಲಿಲ್ಲ. ಅಣೆಕಟ್ಟೆಯನ್ನು ಪ್ರದರ್ಶನಕ್ಕಾಗಿ ಕಟ್ಟಿದರೇ ಎಂದು ಮೋದಿ ಪ್ರಶ್ನಿಸಿದ್ದಾರೆ. ಈ ಕೆಲಸವನ್ನು ತಾವು ಕೈಗೆತ್ತಿಕೊಂಡು 20 ವರ್ಷಗಳಲ್ಲಿ ಮುಗಿಸಿದ್ದಾಗಿ ಹೇಳಿದರು.

ಸರ್ದಾರ್‌ ಸರೋವರ ಯೋಜನೆಯನ್ನು ಸ್ಥಗಿತಗೊಳಿಸಲು ಯತ್ನಿಸಿದ ‘ನಗರ ನಕ್ಸಲರು’ ವ್ಯಾಜ್ಯಕ್ಕೂ ಇಳಿದರು. 40–50 ವರ್ಷಗಳಷ್ಟು ನಮ್ಮ ಸಮಯ ವ್ಯರ್ಥ ಮಾಡಿದರು. ನ್ಯಾಯಾಲಯದ ಕಂಬ ಅಲೆಯುವಂತೆ ಮಾಡಿದರು. ಗುಜರಾತ್‌ನ ಬಡ ಜನರ ಹಣ ಪೋಲಾ
ಗುವಂತೆ ಮಾಡಿದರು ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT