ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ: ಒಂದೇ ದಿನದಲ್ಲಿ ವಿಚಾರಣೆ ನಡೆಸಿ ತೀರ್ಪು ಪ್ರಕಟ

ಬಿಹಾರದ ಅರರಿಯಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ
Last Updated 28 ನವೆಂಬರ್ 2021, 16:15 IST
ಅಕ್ಷರ ಗಾತ್ರ

ಅರರಿಯಾ, ಬಿಹಾರ (ಪಿಟಿಐ): ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆಯನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಿ, ತೀರ್ಪು ಪ್ರಕಟಿಸಲಾಗಿದೆ. ಇದು ದೇಶದಲ್ಲಿ ನಡೆದ ಪ್ರಕರಣವೊಂದರ ಅತ್ಯಂತ ತ್ವರಿತ ವಿಚಾರಣೆ ಎನ್ನಲಾಗುತ್ತಿದೆ.

ಕಳೆದ ಜುಲೈ 22ರಂದು ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಅರರಿಯಾದ ಮಹಿಳಾ ಪೊಲೀಸ್‌ ಠಾಣೆಯ ಅಧಿಕಾರಿ ರೀಟಾ ಕುಮಾರಿ ಈ ಪ್ರಕರಣಕ್ಕೆ ಸಂಬಂಧಿಸಿ ಮಾರನೇ ದಿನ ಎಫ್‌ಐಆರ್‌ ದಾಖಲಿಸಿದ್ದರು.

ನ್ಯಾಯಾಧೀಶ ಶಶಿಕಾಂತ್ ರಾಯ್‌ ಅವರು ಅಪರಾಧಿಗೆ ₹ 50,000 ದಂಡ ವಿಧಿಸಿದರು. ಅಲ್ಲದೇ, ಸಂತ್ರಸ್ತ ಬಾಲಕಿಯ ಪುನರ್ವಸತಿಗಾಗಿ ₹ 7 ಲಕ್ಷ ನೀಡುವಂತೆಯೂ ನಿರ್ದೇಶನ ನೀಡಿದ್ದಾರೆ.

ನ್ಯಾಯಾಧೀಶ ರಾಯ್ ಅವರು ಅಕ್ಟೋಬರ್ 4ರಂದು ಈ ತೀರ್ಪು ಪ್ರಕಟಿಸಿದ್ದು, ಅದೇಶದ ಪ್ರತಿ ನ.26ಕ್ಕೆ ಲಭ್ಯವಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಪೋಕ್ಸೊ ನ್ಯಾಯಾಲಯವೊಂದು ಪ್ರಕರಣವೊಂದರ ವಿಚಾರಣೆಯನ್ನು ಅತ್ಯಂತ ತ್ವರಿತವಾಗಿ ನಡೆಸಿ, ತೀರ್ಪು ಪ್ರಕಟಿಸಿದೆ’ ಎಂದು ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದ ಸರ್ಕಾರಿ ವಕೀಲ ಶ್ಯಾಮಲಾಲ್‌ ಯಾದವ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. 2018ರ ಆಗಸ್ಟ್‌ನಲ್ಲಿ ದತಿಯಾ ಜಿಲ್ಲಾ ನ್ಯಾಯಾಲಯ ಪ್ರಕರಣ ವಿಚಾರಣೆಯನ್ನು ಮೂರು ದಿನಗಳಲ್ಲಿ ಪೂರ್ಣಗೊಳಿಸಿ, ತೀರ್ಪು ಪ್ರಕಟಿಸಿತ್ತು ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT