ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಘರ್ಷಣೆಯಿಂದ ಭಾರತ – ಚೀನಾ ಸಂಬಂಧಕ್ಕೆ ಹಾನಿ: ಬಿಜೆಪಿ ಸಂಸದ ಗಾವೊ

Last Updated 13 ಡಿಸೆಂಬರ್ 2022, 14:20 IST
ಅಕ್ಷರ ಗಾತ್ರ

ಇಟಾನಗರ: ತವಾಂಗ್ ಸೆಕ್ಟರ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತ ಮತ್ತು ಚೀನಾ ನಡುವೆ ನಡೆದಿರುವ ಗಡಿ ಘರ್ಷಣೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಅಡ್ಡಿಯುಂಟು ಮಾಡುತ್ತದೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಪಿರ್ ಗಾವೊ ತಿಳಿಸಿದ್ದಾರೆ.

‘ಡಿಸೆಂಬರ್ 9 ರ ಘಟನೆಯ ಬಗ್ಗೆ ಕೇಳಿದಾಗ ನನಗೆ ನೋವಾಯಿತು. ನಾನು ಇದನ್ನು ಖಂಡಿಸುತ್ತೇನೆ. ಭವಿಷ್ಯದಲ್ಲಿ ಚೀನಾ ಸೇನೆ ಇಂತಹ ಕೃತ್ಯಗಳನ್ನು ಮುಂದುವರಿಸುತ್ತಾ ಹೋದರೆ ಭಾರತ-ಚೀನಾ ಸಂಬಂಧಗಳು ಹದಗೆಡುತ್ತವೆ’ ಎಂದು ಸೋಮವಾರ ವಿಡಿಯೊ ಸಂದೇಶದಲ್ಲಿ ಅವರು ಹೇಳಿದ್ದಾರೆ.

‘ಭಾರತ ಮತ್ತು ಚೀನಾ ಸರ್ಕಾರಗಳು ಸಂಬಂಧಗಳನ್ನು ಉತ್ತಮಗೊಳಿಸುವತ್ತ ಕೆಲಸ ಮಾಡಬೇಕು’ ಎಂದು ಅರುಣಾಚಲ ಪೂರ್ವ ಕ್ಷೇತ್ರದ ಲೋಕಸಭಾ ಸಂಸದ ಗಾವೊ ಹೇಳಿದರು.

‘ಡಿಸೆಂಬರ್ 9 ರಂದು, ಚೀನಾದ ಪಡೆಗಳು ತವಾಂಗ್ ಸೆಕ್ಟರ್‌ನಲ್ಲಿನ ವಾಸ್ತವ ಗಡಿ ರೇಖೆ ಸಮೀಪಿಸಿದ್ದವು. ಭಾರತೀಯ ಯೋದರು ಅವರಿಗೆ ಸೂಕ್ತ ತಿರುಗೇಟು ಕೊಟ್ಟು ಹಿಂದಕ್ಕಟ್ಟಿದರು. ಈ ಮುಖಾಮುಖಿ ಕಾಳಗದಲ್ಲಿ ಎರಡೂ ಕಡೆ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಸೇನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT