Live–ಭಾರತದ 75ನೇ ಸ್ವಾತಂತ್ರ್ಯೋತ್ಸವ| ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಎನ್‌ಇಪಿ ಪ್ರೋತ್ಸಾಹ: ಮೋದಿ
LIVE
ಇಂದು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ. ದೇಶವು 'ಆಜಾದಿ ಕ ಅಮೃತ ಮಹೋತ್ಸವ' ಹೆಸರಿನಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ದೆಹಲಿಯ ಕೆಂಪು ಕೋಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಮೂಲಕ 75ನೇ ಸ್ವಾತಂತ್ರ್ಯ ದಿನದ ಆಚರಣೆಗಳಿಗೆ ಅಧಿಕೃತ ಚಾಲನೆ ದೊರೆತಿದೆ. ಭಾರತದ ಭದ್ರತಾ ಪಡೆಗಳು ಮತ್ತು ಶಸಸ್ತ್ರ ಪಡೆಗಳಿಂದ ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸುವ ಸೀಮಿತ ಕಾರ್ಯಕ್ರಮಗಳು ನಡೆದವು.