ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾದಲ್ಲಿ ಯಾರು ಬಲಶಾಲಿ?

Last Updated 20 ಅಕ್ಟೋಬರ್ 2020, 19:41 IST
ಅಕ್ಷರ ಗಾತ್ರ
ADVERTISEMENT
""
""

ಏಷ್ಯಾದಲ್ಲಿ ಯಾರು ಬಲಶಾಲಿ– ಸೂಚ್ಯಂಕದಲ್ಲಿ ಭಾರತವು ನಾಲ್ಕನೇ ಸ್ಥಾನ ಪಡೆದಿದೆ. ಅಮೆರಿಕವು ಮೊದಲ ಸ್ಥಾನದಲ್ಲಿದ್ದರೆ, ಚೀನಾ ಮತ್ತು ಜಪಾನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. 100 ಅಂಕಗಳ ಸೂಚ್ಯಂಕದಲ್ಲಿ 2019ರಲ್ಲಿ ಪಡೆದಿದ್ದ ಅಂಕಗಳಿಗಿಂತ 1.3ರಷ್ಟು ಕಡಿಮೆ ಅಂಕಗಳನ್ನು ಭಾರತ ಪಡೆದಿದೆ. ಏಷ್ಯಾದಲ್ಲಿನ 26 ದೇಶಗಳಲ್ಲಿ 18 ದೇಶಗಳು ಕಳೆದ ವರ್ಷಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿವೆ. ಇದರಲ್ಲಿ ಭಾರತವೂ ಸೇರಿದೆ. ಲೋವಿ ಇನ್‌ಸ್ಟಿಟ್ಯೂಟ್‌ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತದೆ.

ಭಾರತವು ತನ್ನ ಶಕ್ತಿ ಮತ್ತು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಇರುವುದರಿಂದಲೇ ಕಡಿಮೆ ಅಂಕಗಳನ್ನು ಪಡೆದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.ಎಂಟು ಪ್ರಮುಖ ಕ್ಷೇತ್ರಗಳಲ್ಲಿ ದೇಶಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಎಂಟರಲ್ಲಿ ಕೆಲವು ಕ್ಷೇತ್ರಗಳಲ್ಲಿ ಭಾರತವು ಪ್ರಗತಿ ಸಾಧಿಸಿದೆ. ಉಳಿದ ಕ್ಷೇತ್ರಗಳಲ್ಲಿ ನಕಾರಾತ್ಮಕ ಪ್ರಗತಿ ಸಾಧಿಸಿದೆ.

ಭಾರತವು ಆರ್ಥಿಕ ಸಂಬಂಧದಲ್ಲಿ ನಕಾರಾತ್ಮಕ ಪ್ರಗತಿಯನ್ನು ಸಾಧಿಸಿದೆ. 2019ರಲ್ಲಿ ಈ ಕ್ಷೇತ್ರದಲ್ಲಿ ಭಾರತವು 6ನೇ ಸ್ಥಾನದಲ್ಲಿತ್ತು. ಅದರೆ 2020ರಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ನೆರೆ ದೇಶಗಳ ಮೇಲೆ ಆರ್ಥಿಕ ಪ್ರಭಾವ ಬೀರುವಲ್ಲಿ ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳುವುದರಲ್ಲಿ ಭಾರತ ವಿಫಲವಾಗಿದೆ. ಈ ಮೊದಲು ನೇಪಾಳದಲ್ಲಿ ಭಾರತವು ಅಗ್ರ ವಿದೇಶಿ ಹೂಡಿಕೆದಾರನಾಗಿತ್ತು. ಆದರೆ ಈಗ ಆ ಸ್ಥಾನವನ್ನು ಚೀನಾ ಕಬಳಿಸಿಕೊಂಡಿದೆ. ಶ್ರೀಲಂಕಾ, ಮಾಲ್ಡೀವ್ಸ್‌ ಮತ್ತು ಮ್ಯಾನ್ಮಾರ್‌ನಲ್ಲೂ ಭಾರತದ ಆರ್ಥಿಕತೆಯು ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ನೆರೆ ದೇಶಗಳ ಜತೆ ದ್ವಿಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT