ಶನಿವಾರ, ಡಿಸೆಂಬರ್ 4, 2021
20 °C

ಗಡಿ: ಭಾರತ–ಚೀನಾ ಮಿಲಿಟರಿ ಮಾತುಕತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ಬಳಿ ನಿರ್ಮಾಣವಾಗಿರುವ ಉದ್ವಿಗ್ನ ವಾತಾವರಣ ತಿಳಿಗೊಳಿಸಲು ಭಾರತ ಮತ್ತು ಚೀನಾ ಸೇನಾಧಿಕಾರಿಗಳ ಮಧ್ಯೆ ಮಂಗಳವಾರ ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ.

ಗಡಿಯಲ್ಲಿ ನಿರ್ಮಾಣವಾಗಿರುವ ಸಂಘರ್ಷದ ಸ್ಥಿತಿಯನ್ನು ಶಮನಗೊಳಿಸುವ ಕುರಿತು ಎರಡೂ ಕಡೆಯ ಸೇನಾಧಿಕಾರಿಗಳು ಚರ್ಚಿಸಿದರು ಎನ್ನಲಾಗಿದೆ. ನವದೆಹಲಿಯಲ್ಲಿರುವ ಭೂಸೇನೆಯ ಪ್ರಧಾನ ಕಚೇರಿ ಯಲ್ಲಿ ನಡೆದ ಉನ್ನತ ಮಟ್ಟದ ಸಭೆ ಯಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರು ಹಿರಿಯ ಸೇನಾಧಿಕಾರಿಗಳ ಜತೆ ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ಯುದ್ಧ ವಿಮಾನ ಹಾರಾಟ: ಪಾಂಗಾಂಗ್‌ ಸರೋವರದ ಸುತ್ತಲಿನ ಕಣಿವೆ ಪ್ರದೇಶ ಮತ್ತು ಪರ್ವತಶ್ರೇಣಿಯಲ್ಲಿ ಸೇನೆಯ ವಿಶೇಷ ತುಕಡಿಯನ್ನು ನಿಯೋಜಿಸಲಾಗಿದೆ. ಎಲ್‌ಎಸಿ ಮತ್ತು ಪಾಂಗಾಂಗ್ ಸುತ್ತಮುತ್ತ ಸದಾ ನಿಗಾ ಇಡುವಂತೆ ಭಾರತೀಯ ವಾಯುಪಡೆಗೆ ಸೂಚಿ‌ಸಲಾಗಿದೆ. ಹಲವು ತಿಂಗಳಿಂದ  ಲಡಾಖ್‌ ವಾಯುನೆಲೆಯಲ್ಲಿ ಬೀಡು ಬಿಟ್ಟಿರುವ ಸುಖೋಯ್‌30 ಎಂಕೆಐ, ಜಾಗ್ವಾರ್, ಮಿರಾಜ್‌ 2000 ಯುದ್ಧ ವಿಮಾನಗಳು ಎಲ್‌ಎಸಿ ಬಳಿ ಗಸ್ತು ತಿರುಗುತ್ತಿವೆ.  ಗಡಿಯ ಚೀನಾ ಭಾಗ ದಲ್ಲಿಯೂ ಜೆ–20 ಯುದ್ಧ ವಿಮಾನಗಳು ಹಾರಾಟ ನಡೆಸಿರುವ ವರದಿಗಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು