ಮಂಗಳವಾರ, ಮಾರ್ಚ್ 28, 2023
21 °C

India Covid-19 Update: 12,729 ಹೊಸ ಪ್ರಕರಣಗಳು, 221 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಶುಕ್ರವಾರ ಬೆಳಿಗ್ಗೆವರೆಗೂ 24 ಗಂಟೆಗಳಲ್ಲಿ ದೇಶದಾದ್ಯಂತ 12,729 ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು, 221 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 3,43,33,754 ಕ್ಕೆ ಏರಿಕೆಯಾಗಿದೆ. ಇದುವರೆಗೆ 3,37,24,959 ಮಂದಿ ಗುಣಮುಖರಾಗಿದ್ದಾರೆ.  ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,48,922 ಕ್ಕೆ ಏರಿಕೆಯಾಗಿದೆ.

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.43ರಷ್ಟಿದೆ. ಕಳೆದ 28 ದಿನಗಳಿಂದ ನಿರಂತರವಾಗಿ  ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನಕ್ಕೆ 20 ಸಾವಿರದೊಳಗೆ ವರದಿಯಾಗುತ್ತಿದೆ. ಸತತವಾಗಿ 131 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ.

ದೇಶದಲ್ಲಿ ಚೇತರಿಕೆ ದರ ಶೇ 98.23 ರಷ್ಟಿದ್ದು, 107.70 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ 1,40,345, ಕರ್ನಾಟಕದಲ್ಲಿ 38,095, ತಮಿಳುನಾಡಿನಲ್ಲಿ 36,191, ಕೇರಳದಲ್ಲಿ 32,734, ದೆಹಲಿಯಲ್ಲಿ 25,091, ಉತ್ತರ ಪ್ರದೇಶದಲ್ಲಿ 22,902 ಮತ್ತು ಪಶ್ಚಿಮ ಬಂಗಾಳದಲ್ಲಿ 19,188 ಸೇರಿದಂತೆ ದೇಶದಲ್ಲಿ ಇದುವರೆಗೆ ಒಟ್ಟು 4,59,873 ಸಾವುಗಳು ವರದಿಯಾಗಿವೆ.

ಕೇರಳದಲ್ಲಿ 75,171, ಮಹಾರಾಷ್ಟ್ರದಲ್ಲಿ 18,691, ತಮಿಳುನಾಡಿನಲ್ಲಿ 10,895, ಕರ್ನಾಟಕದಲ್ಲಿ 8,296, ಪಶ್ಚಿಮ ಬಂಗಾಳದಲ್ಲಿ 8,193 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು