ಸೋಮವಾರ, ಜನವರಿ 17, 2022
19 °C

ನಾಲ್ಕು ತಿಂಗಳಲ್ಲಿ ಮತ್ತೆ ಹೆಚ್ಚಾದ ದೇಶದ ನಿರುದ್ಯೋಗ ಪ್ರಮಾಣ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ನಿರುದ್ಯೋಗ ದರ ಕಳೆದ ನಾಲ್ಕು ತಿಂಗಳಲ್ಲಿ ಅತಿ ಹೆಚ್ಚಿನ ಮಟ್ಟ ಕಂಡಿದೆ. ಡಿಸೆಂಬರ್‌ನಲ್ಲಿ ನಿರುದ್ಯೋಗದ ದರ ಶೇ 7.9 ಕ್ಕೆ ತಲುಪಿದೆ ಎಂದು ಸೆಂಟರ್‌ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆ (ಸಿಎಂಐಇ) ಬಿಡುಗಡೆ ಮಾಡಿದ ಅಂಕಿ–ಅಂಶಗಳು ಹೇಳಿವೆ.

ಇದು ಕಳೆದ ನವೆಂಬರ್‌ನ ಶೇ 7.0 ದಿಂದ ಡಿಸೆಂಬರ್‌ನಲ್ಲಿ ಶೇ 7.9 ಕ್ಕೆ ಜಿಗಿತ ಕಂಡಿದೆ ಎಂದು ವರದಿ ಹೇಳಿದೆ. 2021ರ ಆಗಸ್ಟ್‌ನಲ್ಲಿ ನಿರುದ್ಯೋಗ ದರ ಶೇ 8.3 ರಷ್ಟಿತ್ತು.

ಡಿಸೆಂಬರ್‌ನಲ್ಲಿ ನಗರ ನಿರುದ್ಯೋಗ ದರ ಶೇ 8.2 ರಿಂದ ಶೇ 9.3 ಕ್ಕೆ ಜಿಗಿತ ಕಂಡಿದೆ. ಗ್ರಾಮೀಣ ನಿರುದ್ಯೋಗ ದರ ಶೇ 6.4 ರಿಂದ ಶೇ 7.3 ಕ್ಕೆ ಹೆಚ್ಚಳಗೊಂಡಿದೆ ಎಂದು ಅಂಕಿ–ಅಂಶಗಳು ತೋರಿಸಿವೆ.

ಮುಂಬೈ ಮೂಲದ ಸಿಎಂಐಇ ಸಂಸ್ಥೆ ದೇಶದ ಉದ್ಯೋಗಕ್ಕೆ ಸಂಬಂಧಿಸಿದ ಅಂಕಿ–ಅಂಶಗಳನ್ನು ನಿಯಮಿತವಾಗಿ ಬಿಡುಗಡೆ ಮಾಡುತ್ತಾ ಬರುತ್ತಿದೆ. ಇದು ಆರ್ಥಿಕ ತಜ್ಞರಿಗೆ ಹಾಗೂ ನೀತಿ ನಿರೂಪಕರಿಗೆ ಅಂಕಿ–ಅಂಶಗಳನ್ನು ವಿಶ್ಲೇಷಿಸಲು ಸಹಾಯಕವಾಗಿದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು ನಿರುದ್ಯೋಗದ ಅಂಕಿ–ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ.

ವೇಗವಾಗಿ ಹರಡಬಹುದು ಎಂದು ಎಚ್ಚರಿಸಲಾಗಿರುವ ಓಮೈಕ್ರಾನ್ ತಳಿ ದೇಶದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಕೊರೊನಾವೈರಸ್ ಉಲ್ಬಣ ಹಾಗೂ ಓಮೈಕ್ರಾನ್ ತಳಿಯ ಆತಂಕ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಮತ್ತೆ ಕಾರ್ಮೋಡ ಕವಿಯುವಂತೆ ಮಾಡಿದೆ. ಇದರಿಂದ ಅನೇಕ ರಾಜ್ಯಗಳು ಲಾಕ್‌ಡೌನ್‌ ಜಾರಿ ಮಾಡುವ ಮುನ್ಸೂಚನೆ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು