ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನಕ್ಕೆ ಭಾರತದಿಂದ ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳ ರವಾನೆ

ಔಷಧಗಳು ಮತ್ತು ವೈದ್ಯಕೀಯ ಪರಿಕರಗಳ ಹಸ್ತಾಂತರ
Last Updated 11 ಅಕ್ಟೋಬರ್ 2022, 14:11 IST
ಅಕ್ಷರ ಗಾತ್ರ

ನವದೆಹಲಿ: ಯುದ್ಧಪೀಡಿತ ಅಫ್ಗಾನಿಸ್ತಾನಕ್ಕೆ ಭಾರತ ಮಂಗಳವಾರ ಮತ್ತೊಮ್ಮೆ ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳನ್ನು ರವಾನಿಸಿದೆ. ಈ ಎಲ್ಲ ಪರಿಕರಗಳನ್ನು ಕಾಬೂಲ್‌ನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.

‘ಕಳೆದ ಕೆಲವು ತಿಂಗಳ ಈಚೆಗೆ ಭಾರತ, ಕ್ಷಯರೋಗ ನಿರೋಧಕ ಔಷಧಗಳು, 50,000 ಡೋಸ್‌ ಕೋವಿಡ್‌ ಲಸಿಕೆ ಸೇರಿ 45 ಟನ್‌ ವೈದ್ಯಕೀಯ ಪರಿಕರಗಳನ್ನು ನೀಡುವ ಮೂಲಕ ಅಫ್ಗಾನಿಸ್ತಾನಕ್ಕೆ ನೆರವಾಗಿದೆ. ಇದು ಭಾರತ ಈಚಿನ ತಿಂಗಳುಗಳಲ್ಲಿ ಕಳುಹಿಸುತ್ತಿರುವ 13ನೇ ನೆರವಿನ ಕೊಡುಗೆಯಾಗಿದೆ ’ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಅಲ್ಲದೆ ಅಲ್ಲಿನ ಜನರಿಗಾಗಿ 40,000 ಟನ್ ಗೋಧಿ ಪೂರೈಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT