ಮಂಗಳವಾರ, ಅಕ್ಟೋಬರ್ 20, 2020
23 °C

ಮಾಲ್ಡೀವ್ಸ್‌ಗೆ ಡಾರ್ನಿಯರ್‌ ಕಣ್ಗಾವಲು ವಿಮಾನಗಳನ್ನು ನೀಡಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ದೆಹಲಿ: ಭಾರತವು ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ ಡಾರ್ನಿಯರ್ ವಿಮಾನಗಳನ್ನು ಕೊಡುಗೆಯಾಗಿ ನೀಡಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ದ್ವೀಪ ರಾಷ್ಟ್ರವು ತನ್ನ ವಿಶೇಷ ಆರ್ಥಿಕ ವಲಯದ ಮೇಲೆ ಕಣ್ಗಾವಲು ಹೆಚ್ಚಿಸಲು ಮತ್ತು ಸಾಗರ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಈ ವಿಮಾನಗಳನ್ನು ಪೂರೈಸಲಾಗಿದೆ ಎಂದು ಸರ್ಕಾರ ಹೇಳಿದೆ.

ವಿಮಾನವನ್ನು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಡಿಎನ್ಎಫ್) ನಿರ್ವಹಿಸಲಿದೆ. ಅದರ ವೆಚ್ಚವನ್ನು ಭಾರತ ಭಾರತ ಭರಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ, ಮಾಲ್ಡೀವ್ಸ್‌ನ ಅಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಡಾರ್ನಿಯರ್‌ ವಿಮಾನಗಳನ್ನು ಪೂರೈಸುವಂತೆ ಕೋರಿಕೆ ಸಲ್ಲಿಸಿದ್ದರು.

ವಿಮಾನದ ನಿರ್ವಹಣೆಗಾಗಿ ಪೈಲಟ್‌ಗಳು, ವಿಮಾನ ವೀಕ್ಷಕರು ಮತ್ತು ಎಂಜಿನಿಯರ್‌ಗಳು ಸೇರಿದಂತೆ ಮಾಲ್ಡೀವ್ಸ್‌ನ ಏಳು ಮಿಲಿಟರಿ ಸಿಬ್ಬಂದಿಗೆ ಭಾರತೀಯ ನೌಕಾಪಡೆಯಿಂದ ತರಬೇತಿ ಕೊಡಲಾಗಿದೆ.

‘ಈ ವಿಮಾನವನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ, ವರದಿಯಾಗದ ಮತ್ತು ಅನಿಯಂತ್ರಿತ ಮೀನುಗಾರಿಕೆ ವಿರುದ್ಧದ ಕಾರ್ಯಾಚರಣೆಗಳಲ್ಲಿಯೂ ಬಳಸಲಾಗುವುದು. ಮಾದಕವಸ್ತು ಕಳ್ಳಸಾಗಣೆದಾರರ ಚಲನವಲನ ಕುರಿತು ಭಾರತ ನಿಯಮಿತವಾಗಿ ಮಾಲ್ಡೀವ್ಸ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಿದೆ,’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು