ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದಾದ ಸಾವುಗಳ ಅಂದಾಜು: WHO ಅನುಸರಿಸುವ ವಿಧಾನ ಪ್ರಶ್ನಿಸಿದ ಭಾರತ

Last Updated 17 ಏಪ್ರಿಲ್ 2022, 13:13 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ನಿಂದಾಗಿ ದೇಶದಲ್ಲಿ ಸಂಭವಿಸಿರುವ ಸಾವುಗಳನ್ನು ಅಂದಾಜಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಸರಿಸುತ್ತಿರುವ ವಿಧಾನವನ್ನು ಭಾರತ ಪ್ರಶ್ನಿಸಿದೆ.

‘ಭೌಗೋಳಿಕವಾಗಿ ಹಾಗೂ ಜನಸಂಖ್ಯಾ ದೃಷ್ಟಿಯಿಂದ ಬೃಹತ್‌ ದೇಶವಾಗಿರುವ ಭಾರತದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಲೆಕ್ಕಹಾಕಲು ಗಣಿತ ಮಾದರಿಯ ವಿಧಾನವನ್ನು ಬಳಸುವುದು ಸರಿಯಲ್ಲ’ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.

‘ನ್ಯೂಯಾರ್ಕ್ ಟೈಮ್ಸ್‌’ನಲ್ಲಿ ಏ.16ರಂದು ಪ್ರಕಟವಾಗಿರುವ ಲೇಖನವೊಂದಕ್ಕೆ ಸಂಬಂಧಿಸಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

‘ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಸಾವಿನ ಸಂಖ್ಯೆಗಳಿಗಿಂತ, ಸಂಸ್ಥೆ ಬಳಸುವ ವಿಧಾನದ ಬಗ್ಗೆಯೇ ನಮ್ಮ ಆಕ್ಷೇಪ ಇದೆ’ ಎಂದು ಸಚಿವಾಲಯ ಹೇಳಿದೆ.

‘ಕೋವಿಡ್‌ನಿಂದಾಗಿ ಸತ್ತವರ ಸಂಖ್ಯೆಯನ್ನು ಅಂದಾಜಿಸಲು ಅನುಸರಿಸುತ್ತಿರುವ ವಿಧಾನದ ಬಗ್ಗೆ ಈ ಹಿಂದೆಯೂ ಹಲವು ಬಾರಿ ಭಾರತ ತನ್ನ ಕಳವಳವನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹಂಚಿಕೊಂಡಿದೆ’.

‘ಮೃತರ ಸಂಖ್ಯೆಯನ್ನು ಅಂದಾಜು ಮಾಡಲು ಬೇರೆ ಬೇರೆ ದೇಶಗಳಿಗೆ ಬೇರೆಬೇರೆ ಗಣಿತ ಮಾದರಿಗಳನ್ನೇ ಬಳಸಲಾಗುತ್ತಿದೆ. ಆದರೆ, ಎರಡನೇ ಶ್ರೇಣಿ ದೇಶಗಳಲ್ಲೊಂದಾದ ಭಾರತದಲ್ಲಿನ ಸಾವುಗಳ ಸಂಖ್ಯೆಯನ್ನು ಲೆಕ್ಕಹಾಕಲು ಒಂದನೇ ಶ್ರೇಣಿ ದೇಶಗಳಿಗೆ ಸಂಬಂಧಿಸಿದ ವಿಶ್ಲೇಷಣೆಯನ್ನೇ ಅನ್ವಯಿಸಲಾಗುತ್ತಿದೆ’ ಎಂದೂ ಸಚಿವಾಲಯ ಆಕ್ಷೇಪಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸುವ ವಿಧಾನದ ಬಗ್ಗೆ ಚೀನಾ, ಇರಾನ್‌, ಬಾಂಗ್ಲಾದೇಶ, ಸಿರಿಯಾ, ಇಥಿಯೋಪಿಯಾ ಹಾಗೂ ಈಜಿಪ್ಟ್‌ ಸಹ ಆಕ್ಷೇಪ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT