Covid-19 India Update: ದೇಶದಾದ್ಯಂತ 1.35 ಲಕ್ಷ ಕೋವಿಡ್ ಪ್ರಕರಣಗಳು ಸಕ್ರಿಯ

ನವದೆಹಲಿ: ದೇಶದಲ್ಲಿ 24 ಗಂಟೆಗಳ ಅಂತರದಲ್ಲಿ ಕೋವಿಡ್–19 ದೃಢಪಟ್ಟ 11,271 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 11,376 ಮಂದಿ ಗುಣಮುಖರಾಗಿದ್ದರೆ, ಸೋಂಕಿನಿಂದ 285 ಜನ ಸಾವಿಗೀಡಾಗಿದ್ದಾರೆ.
ಒಟ್ಟು ಕೋವಿಡ್ ದೃಢ ಪ್ರಕರಣಗಳ ಸಂಖ್ಯೆ 3,44,37,307 ತಲುಪಿದ್ದು, ಈ ಪೈಕಿ ಪ್ರಸ್ತುತ 1,35,918 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ ಕೋವಿಡ್ ಕಾರಣಗಳಿಂದಾಗಿ ದೇಶದಾದ್ಯಂತ 4,63,530 ಮಂದಿ ಮೃತಪಟ್ಟಿದ್ದಾರೆ ಹಾಗೂ 3,38,37,859 ಜನ ಚೇತರಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.
ಕೇರಳದಲ್ಲಿ ಶನಿವಾರ ರಾತ್ರಿ ವರೆಗೂ ಕೋವಿಡ್ ದೃಢಪಟ್ಟ 6,468 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಇದುವರೆಗೂ 112.01 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ.
➡️ India’s Cumulative #COVID19 Vaccination Coverage exceeds 112.01 Cr (1,12,01,03,225).
➡️ More than 57.43 Lakh doses administered in last 24 hours.#Unite2FightCorona #StaySafeStayHealthy pic.twitter.com/ZyqK64EItQ
— #IndiaFightsCorona (@COVIDNewsByMIB) November 14, 2021
ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ 25.29 ಕೋಟಿಗೂ ಅಧಿಕ ಕೋವಿಡ್ ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. 50.95 ಲಕ್ಷಕ್ಕೂ ಹೆಚ್ಚು ಜನ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಜಾಗತಿಕವಾಗಿ 744.14 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಣೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.