ಶನಿವಾರ, ಸೆಪ್ಟೆಂಬರ್ 18, 2021
30 °C

ಹಸ್ತಾಂತರ: ನೀರವ್‌ ಮೋದಿಅರ್ಜಿಯ ಪರಿಶೀಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್ (ಪಿಟಿಐ): ಕಾನೂನು ಪ್ರಕ್ರಿಯೆ ಜಾರಿಗೊಳಿಸಲು ಭಾರತಕ್ಕೆ ತನ್ನನ್ನು ಹಸ್ತಾಂತರ ಮಾಡುವ ಕುರಿತ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ವಜ್ರದ ವ್ಯಾಪಾರಿ ನೀರವ್‌ ಮೋದಿಗೆ ಅನುಮತಿ ನೀಡಿರುವ ಲಂಡನ್‌ ಹೈಕೋರ್ಟ್‌ ಆದೇಶವನ್ನು ಪರಿಶೀಲಿಸಲಾಗುತ್ತದೆ ಎಂದು ಭಾರತ ಮತ್ತು ಬ್ರಿಟನ್‌ ಹೇಳಿವೆ.

ಲಂಡನ್‌ನ ಕೋರ್ಟ್‌ನಲ್ಲಿ ಭಾರತ ಪ್ರತಿನಿಧಿಸುವ ಕ್ರೌನ್‌ ಪ್ರಾಸಿಕ್ಯೂಷನ್ ಸರ್ವೀಸ್‌ (ಸಿಪಿಎಸ್) ಈ ಮಾಹಿತಿ ನೀಡಿದೆ. 50 ವರ್ಷದ ವ್ಯಾಪಾರಿಯ ಮಾನಸಿಕ ಸ್ಥಿತಿ ಆಧರಿಸಿ ಈ ಮನವಿ ಪರಿಗಣಿಸಬಹುದಾಗಿದೆ ಎಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ಆರೋಪಿಯಾಗಿರುವ ನೀರವ್‌ ಮೋದಿ, ಸದ್ಯ ಲಂಡನ್‌ನ ವಾಂಡ್ಸ್‌ವರ್ಥ್‌ ಕಾರಾಗೃಹದಲ್ಲಿ ಇದ್ದಾರೆ.

ಭಾರತಕ್ಕೆ ಇವರ ಹಸ್ತಾಂತರ ಆದೇಶವನ್ನು ಇವರು ಎರಡು ಅಂಶಗಳ ಆಧಾರದಲ್ಲಿ ಪ್ರಶ್ನಿಸಬಹುದು. ಈ ಕುರಿತು ಭಾರತ ಸರ್ಕಾರದ ಜೊತೆಗೆ ಸಿಪಿಎಸ್‌ ಚರ್ಚೆಯಲ್ಲಿದೆ ಎಂದು ಅದರ ವಕ್ತಾರರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು