ಭಾರತದ ಲಸಿಕೆ ಪ್ರಮಾಣ ಪತ್ರವಿದ್ದರೆ ಈ ದೇಶಗಳಿಗೆ ಪ್ರಯಾಣ ಅಭಾದಿತ

ನವದೆಹಲಿ : ಭಾರತ ನೀಡುವ ಕೋವಿಡ್ -19 ಲಸಿಕೆ ಪ್ರಮಾಣ ಪತ್ರಕ್ಕೆ ಇನ್ನೂ ಐದು ದೇಶಗಳು ಮಾನ್ಯತೆ ನೀಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ.
"ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಪರಸ್ಪರ ಮಾನ್ಯತೆ ಮುಂದುವರೆದಿದೆ. ಎಸ್ಟೋನಿಯಾ, ಕಿರ್ಗಿಸ್ತಾನ್, ಪ್ಯಾಲೆಸ್ತೀನ್, ಮಾರಿಷಸ್ ಮತ್ತು ಮಂಗೋಲಿಯಾ ದೇಶಗಳು ಭಾರತದ ಲಸಿಕಾ ಪ್ರಮಾಣಪತ್ರಕ್ಕೆ ಮಾನ್ಯತೆ " ನೀಡಿವೆ ಎಂದು ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಇಟಲಿಗೆ ಭೇಟಿಯ ವೇಳೆ ಲಸಿಕೆ ಪ್ರಮಾಣ ಪತ್ರಗಳ ಪರಸ್ಪರ ಮಾನ್ಯತೆ ಕುರಿತು ಚರ್ಚೆ ನಡೆಸಲಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶ್ರಿಂಗ್ಲಾ ಹೇಳಿದ್ದರು. ಅದಾದ ಕೆಲವೇ ಸಮಯದಲ್ಲಿ ಐದು ದೇಶಗಳು ಮಾನ್ಯತೆ ನೀಡಿವೆ.
ಈ ಮೊದಲು ಹಂಗೇರಿ ಮತ್ತು ಸೆರ್ಬಿಯಾ ದೇಶಗಳು ಭಾರತದ ಲಸಿಕಾ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಿದ್ದವು.
Mutual recognition of COVID-19 vaccination certificates continues!
Five more recognitions for India’s vaccination certificate, including from Estonia, Kyrgyzstan, State of Palestine, Mauritius and Mongolia.
— Arindam Bagchi (@MEAIndia) November 1, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.