ಶನಿವಾರ, ಮಾರ್ಚ್ 25, 2023
28 °C

ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ನಿಷ್ಕ್ರಿಯ ಕಣ್ಗಾವಲು ಉಪಗ್ರಹ RISAT-2

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಅಕ್ಟೋಬರ್‌ 30ರಂದು ಅನಿಯಂತ್ರಿತವಾಗಿ ಭೂ ವಾತಾವರಣಕ್ಕೆ ವಾಪಸ್ಸಾದ ಭಾರತದ ನಿಷ್ಕ್ರಿಯ ಉಪಗ್ರಹ RISAT-2, ಇಂಡೋನೇಷ್ಯಾದ ಜಕಾರ್ತಾ ಸಮೀಪ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ–ಐಎಸ್‌ಆರ್‌ಒ) ತಿಳಿಸಿದೆ.

300 ಕೆಜಿ ತೂಕದ ಕಣ್ಗಾವಲು ಉಪಗ್ರಹ RISAT-2 ಅನ್ನು ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ 2009ರ ಏಪ್ರಿಲ್‌ 20ರಂದು ಉಡಾವಣೆ ಮಾಡಲಾಗಿತ್ತು.

ಕಾರ್ಯಾಚರಣೆಗೆ ಕಳುಹಿಸುವ ಮುನ್ನ ಉಪ್ರಗ್ರಹಕ್ಕೆ 30 ಕೆಜಿ ಇಂಧನ ತುಂಬಿಸಲಾಗಿತ್ತು. ಭೂಮಿಯ ವಾತಾವರಣಕ್ಕೆ ಮರುಪ್ರವೇಶ ಮಾಡಿದಾಗ ಉಪಗ್ರಹದಲ್ಲಿ ಇಂಧನ ಖಾಲಿಯಾಗಿತ್ತು ಎಂದು ಇಸ್ರೊ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು