ಬೆಂಗಳೂರು: ‘ಅತ್ಯಾಧುನಿಕ ಜಿಸ್ಯಾಟ್–24 ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು’ ಎಂದು ಇಸ್ರೊ ತಿಳಿಸಿದೆ.

ಇಸ್ರೊ ನಿರ್ಮಿತ ಈ ಉಪಗ್ರಹವನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಉಡಾವಣೆ ಮಾಡಿದೆ. ಕೇಂದ್ರ ಸರ್ಕಾರ ಬಾಹ್ಯಾಕಾಶ ಕ್ಷೇತ್ರದಲ್ಲಿ ತಂದಿರುವ ಸುಧಾರಣೆಗಳ ನಂತರ ಉಡಾವಣೆ ಮಾಡಲಾದ ಮೊದಲ ಸಂವಹನ ಉಪಗ್ರಹ ಇದು.

‘ಈ ಉಪಗ್ರಹವನ್ನು ಡಿಟಿಎಚ್ ಸೇವೆ ನೀಡುವ ಟಾಟಾ ಪ್ಲೇ ಕಂಪನಿಗೆ ಲೀಸ್ ನೀಡಲಾಗಿದೆ. 24–ಕೆಯು ಬ್ಯಾಂಡ್ ಸಂವಹನ ಉಪಗ್ರಹವಾಗಿರುವ ಜಿಸ್ಯಾಟ್–24ನ ಒಟ್ಟು ತೂಕ 4,180 ಕೆ.ಜಿ’ ಎಂದು ಇಸ್ರೊ ತಿಳಿಸಿದೆ.

‘ಇಸ್ರೊದ ಅಂಗಸಂಸ್ಥೆಯಾದ ಎನ್‌ಎಸ್‌ಐಎಲ್‌ಗೆ ಇಂದು ಮಹತ್ವದ ದಿನ. ಡಿಟಿಎಚ್ ಸೇವೆ ನೀಡುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಇಸ್ರೊ ಮುಖ್ಯಸ್ಥ ಡಾ.ಎಸ್.ಸೋಮನಾಥ್ ಹೇಳಿದ್ದಾರೆ.

2019ರಲ್ಲಿ ಎನ್‌ಎಸ್‌ಐಎಲ್ ಸ್ಥಾಪಿಸಲಾಗಿದೆ. ಸಂಸ್ಥೆಯು ಉಪಗ್ರಹಗಳ ನಿರ್ಮಾಣ, ಉಡಾವಣೆ ಹಾಗೂ ಅವುಗಳ ನಿರ್ವಹಣೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.