ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ₹ 13,500 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಪತ್ಮಿ ಆಮಿ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್‌ಪೋಲ್ ರೆಡ್‌ಕಾರ್ನರ್ ಅಮಿ ಮೋದಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ಈ ನೋಟಸ್ ಜಾರಿಯಿಂದ ಆರೋಪಿಗಳು ಯಾವುದೇ ದೇಶದಲ್ಲಿದ್ದರೂ ಅವರನ್ನು ಬಂಧಿಸಬಹುದು.

ಪಿಎನ್‌ಬಿ ಹಗರಣದ ಪ್ರಕರಣ ಹೊರ ಬರುವುದಕ್ಕೂ ಮೊದಲೇ 2018ರ ಜನವರಿ ಮೊದಲ ವಾರದಲ್ಲಿ ನೀರವ್ ಮೋದಿ ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ಆಮಿ ಮೋದಿ ಭಾರತದಿಂದ ತೆರಳಿದ್ದರು. ಸದ್ಯ ಅವರು ಅಮೆರಿಕದಲ್ಲಿ ಇದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆಮಿ ಮೋದಿ ಅವರು ನೀರವ್ ಮೋದಿಯ ಹಲವು ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಹಾಗೂ ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲೂ ಅವರ ಪಾತ್ರ ಇದೆ ಎಂದು ಜಾರಿ ಮತ್ತು ನಿರ್ದೇಶನಾಲಯ ಹೇಳಿದೆ.

ಕಳೆದ ವರ್ಷ (2019) ಮಾರ್ಚ್ 19 ರಂದು ಮೋದಿಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಮೋದಿಯ ಜಾಮೀನು ಅರ್ಜಿ ಹಲವು ಸಲ ತಿರಸ್ಕೃತಗೊಂಡಿದೆ. ಬ್ರಿಟನ್ ಹೈಕೋರ್ಟ್ ಸಹ ಜಾಮೀನು ನೀಡಲು ನಿರಾಕರಿಸದೆ.

ಮೋದಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಿಎಂಎಲ್ಎ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಕಳೆದ ಜೂನ್ ತಿಂಗಳಲ್ಲಿ ಹಾಂಕಾಂಗ್‌ನಿಂದ ಮೋದಿ ಒಡೆತನಕ್ಕೆ ಸೇರಿದ ವಜ್ರ, ಮುತ್ತುಗಳು ಹಾಗೂ ಬೆಳ್ಳಿಯ ಆಭರಣಗಳನ್ನು ಭಾರತಕ್ಕೆ ತರಲಾಗಿದೆ. ಇವುಗಳ ಮೌಲ್ಯ ₹ 1,350 ಕೋಟಿ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.