ಅಹಮದಾಬಾದ್: ‘ಮೂರನೇ ತರಗತಿಯಿಂದಲೇ ಶಾಲೆಗಳಲ್ಲಿ ಸಂಸ್ಕೃತವನ್ನು ಪರಿಚಯಿಸಬೇಕು’ ಎಂದುಆರ್‌ಎಸ್‌ಎಸ್ ಸಂಯೋಜಿತ ಸಂಸ್ಕೃತ ಭಾರತಿಯು ಗುಜರಾತ್ ಸರ್ಕಾರವನ್ನು ಕೋರಿದೆ.

‘ಹಾಡುಗಳು, ಶ್ಲೋಕಗಳು ಮತ್ತು ಸಣ್ಣ ಕಥೆಗಳ ರೂಪದಲ್ಲಿ ಸಂಸ್ಕೃತವನ್ನು ಪರಿಚಯಿಸಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಧರಿಸಿಯೇ ಈ ಕೋರಿಕೆಯನ್ನು ಮಂಡಿಸಲಾಗಿದೆ. ಪ್ರಾಥಮಿಕ ಶಾಲೆಯಿಂದಲೇ ಸಂಸ್ಕೃತವನ್ನು ಪರಿಚಯಿಸಬೇಕು ಎಂದು ನಾವು ಗುಜರಾತ್ ಸರ್ಕಾರವನ್ನು ಕೋರಿದ್ದೇವೆ’ ಎಂದು ಸಂಸ್ಕೃತ ಭಾರತಿಯ ಗುಜರಾತ್ ರಾಜ್ಯದ ಕಾರ್ಯದರ್ಶಿ ಹಿಮಾಂಜಯ್ ಪಾಲಿವಾಲ್ ತಿಳಿಸಿದ್ದಾರೆ.

ಭಾರತೀಯ ಭಾಷಾ ವ್ಯವಸ್ಥೆಗೆ ಸಂಸ್ಕೃತವು ಕೀಲಿಕೈ ಇದ್ದಂತೆ. ನಾವು ಸಂಸ್ಕೃತವನ್ನು ಕಲಿತರೆ, ಅರ್ಥೈಸಿಕೊಂಡರೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯ’ ಎಂದು ಪಾಲಿವಾಲ್ ಪ್ರತಿಪಾದಿಸಿದ್ದಾರೆ.

‘ಹಿಮಾಚಲ ಪ್ರದೇಶವು ಮೂರನೇ ತರಗತಿಯಿಂದ ಹಾಗೂ ಛತ್ತೀಸಗಡ ಸರ್ಕಾರವು ಎರಡನೇ ತರಗತಿಯಿಂದಲೇ ಸಂಸ್ಕೃತವನ್ನು ಪರಿಚಯಿಸುತ್ತಿದೆ. ಶಾಲೆಯ ಪ್ರಾಥಮಿಕ ಹಂತದಲ್ಲೇ ಸಂಸ್ಕೃತವನ್ನು ಪರಿಚಯಿಸಿದರೆ ಅದು ಇತರ ಭಾರತೀಯ ಭಾಷೆಗಳ ಬೆಳವಣಿಗೆಗೆ ಪೂರಕವಾಗಲಿದೆ. ಸಂಸ್ಕೃತವನ್ನು ನಿರ್ಲಕ್ಷಿಸುತ್ತಿರುವುದರಿಂದ ನಾವು ನಮ್ಮ ಶಬ್ದ ಭಂಡಾರವನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.