ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತದ ಬಾಹ್ಯಾಕಾಶ ನಿಲ್ದಾಣ: ಉದ್ಯಮಗಳ ಸಹಕಾರ ಕೋರಿದ ಇಸ್ರೊ

Last Updated 30 ಅಕ್ಟೋಬರ್ 2022, 14:09 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯವಿರುವಮರು ಬಳಕೆಯ ರಾಕೆಟ್‌ ನಿರ್ಮಾಣಕ್ಕಾಗಿ ಉದ್ಯಮಗಳ ಸಹಕಾರ ಕೋರಿದೆ.

‘ರಾಕೆಟ್‌ನ ವಿನ್ಯಾಸ ಕಾರ್ಯದಲ್ಲಿ ಇಸ್ರೊ ತೊಡಗಿಕೊಂಡಿದೆ. ಇದರ ಅಭಿವೃದ್ಧಿಗಾಗಿ ಉದ್ಯಮಗಳು ನಮ್ಮೊಂದಿಗೆ ಕೈಜೋಡಿಸಬೇಕು’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಭಾನುವಾರ ಇಲ್ಲಿ ಮನವಿ ಮಾಡಿದ್ದಾರೆ.

‘ರಾಕೆಟ್‌ ನಿರ್ಮಾಣ ಕಾರ್ಯದಲ್ಲಿ ಉದ್ಯಮಗಳ ಸಹಭಾಗಿತ್ವ ಪ್ರೋತ್ಸಾಹಿಸುವುದು ನಮ್ಮ ಉದ್ದೇಶ. ರಾಕೆಟ್‌ ಅಭಿವೃದ್ಧಿಗೆ ತಗಲುವ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುವುದು ಅಸಾಧ್ಯ. ಉದ್ಯಮಗಳೂ ಈ ಕಾರ್ಯದಲ್ಲಿ ಹೂಡಿಕೆ ಮಾಡಬೇಕು. ಭೂಸ್ಥಿರ ಕಕ್ಷೆಗೆ 10 ಟನ್‌ ತೂಕದ ಅಥವಾ ಕಡಿಮೆ ಎತ್ತರದ ಕಕ್ಷೆಗೆ 20 ಟನ್‌ ತೂಕದ ಉಪಗ್ರಹಗಳನ್ನು ಸಾಗಿಸುವ ರಾಕೆಟ್‌ ನಿರ್ಮಿಸುವುದು ನಮ್ಮ ಗುರಿ’ ಎಂದು ಹೇಳಿದ್ದಾರೆ.

‘ಪಿಎಸ್‌ಎಲ್‌ವಿಯು 1980ರಲ್ಲಿದ್ದ ತಂತ್ರಜ್ಞಾನದ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿರುವ ರಾಕೆಟ್‌. ಇದರ ಮೂಲಕ ಮುಂದಿನ ದಿನಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವುದು ಕಷ್ಟ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT