ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಚಂದ್ರಯಾನ –3 ಯೋಜನೆಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಚಂದ್ರ ಅಂಗಳಕ್ಕೆ ಉಡಾವಣೆಗೆ ಬಳಸುವ ರಾಕೆಟ್‌ನ ಕೊನೆಯ ಹಂತವಾದ ಕ್ರಯೋಜನಿಕ್‌ಗೆ ಶಕ್ತಿ ತುಂಬುವ ಸಿಇ–20 ಕ್ರಯೋಜನಿಕ್ ಇಂಜಿನ್‌ನ ಪರೀಕ್ಷೆ ಸಫಲವಾಗಿದೆ.
’ಫೆಬ್ರುವರಿ 24ರಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಘಟಕದಲ್ಲಿ 25 ಸೆಕೆಂಡುಗಳ ಯೋಜಿತ ಅವಧಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ’ ಎಂದು ಇಸ್ರೋ ತಿಳಿಸಿದೆ.
‘ಪರೀಕ್ಷೆಯು ನಮ್ಮ ನಿರೀಕ್ಷಿತ ಮಾನದಂಡಗಳನ್ನು ತಲುಪಿದ್ದು, ಫಲಿತಾಂಶ ತೃಪ್ತಿದಾಯಕವಾಗಿದೆ’ ಎಂದು ಅದು ಹೇಳಿದೆ.
'ಕ್ರಯೋಜನಿಕ್ ಹಂತದಲ್ಲಿ ಎಂಜಿನ್‌ನ ಇಂಧನ ಟ್ಯಾಂಕ್ ರಚನೆ ಹಾಗೂ ಇಂಧನ ಕೊಳವೆಗಳನ್ನು ಮತ್ತಷ್ಟು ಸುಧಾರಿಸಲಾಗಿದ್ದು, ಬಾಹ್ಯಾಕಾಶ ಸಂಶೋಧನೆಯಲ್ಲಿ ಇದೊಂದು ಮೈಲಿಗಲ್ಲು’ ಎಂದು ವಿವರಿಸಿದೆ.
2019 ಜುಲೈ 22ರಂದು ಶ್ರೀ ಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ’ಚಂದ್ರಯಾನ–2’ ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಆದರೆ ಅದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಹಂತದಲ್ಲಿ ವಿಫಲವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.