ಗುರುವಾರ , ಫೆಬ್ರವರಿ 9, 2023
30 °C

ಇಸ್ರೊ: ನ.26ಕ್ಕೆ ಓಶಿಯನ್‌ಸ್ಯಾಟ್‌-3, 8 ನ್ಯಾನೊ ಉಪಗ್ರಹಗಳ ಉಡಾವಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನವೆಂಬರ್‌ 26ಕ್ಕೆ ಪಿಎಸ್‌ಎಲ್‌ವಿ-ಸಿ54/ಇಒಎಸ್‌-06 ಯೋಜನೆಯ ಮೂಲಕ ಓಶಿಯನ್‌ಸ್ಯಾಟ್‌-3 ಮತ್ತು 8 ನ್ಯಾನೊ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಶನಿವಾರ ಬೆಳಗ್ಗೆ 11.46ಕ್ಕೆ ಸರಿಯಾಗಿ ಗಗನದತ್ತ ಚಿಮ್ಮಲಿದೆ.

ಇಒಎಸ್‌-06 (ಓಶಿಯನ್‌ಸ್ಯಾಟ್‌-3) ಮತ್ತು 8 ನ್ಯಾನೊ ಉಪಗ್ರಹಗಳು ಸೇರಿವೆ. ಈ ಪೈಕಿ ಪಿಕ್ಸ್‌ಕ್ಷೆಲ್‌(Pixxel)ನ ಭೂತಾನ್‌ಸ್ಯಾಟ್‌, ಆನಂದ್‌ ಉಪಗ್ರಹಳು, ಧ್ರುವ ಸ್ಪೇಸ್‌ನ ನಾಲ್ಕು ಥೈಬೊಲ್ಟ್‌ ಉಪಗ್ರಹಗಳು, ಅಮೆರಿಕದ ಸ್ಪೇಸ್‌ಫ್ಲೈಟ್‌ನ ನಾಲ್ಕು ಆ್ಯಸ್ಟ್ರೋಕಾಸ್ಟ್‌ ಉಪಗ್ರಹಗಳು ಸೇರಿವೆ ಎಂದು ಇಸ್ರೊದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು