ಬುಧವಾರ, ಮೇ 12, 2021
18 °C
ಅತಿ ದೊಡ್ಡ ಖಾಸಗಿ ‘ಮಲ್ಟಿ ಸ್ಪೆಷಿಯಾಲಿಟಿ ಆಸ್ಪತ್ರೆ ಸಮೂಹದಿಂಂದ ₹ 87 ಲಕ್ಷ ವಶ

ಆಸ್ಪತ್ರೆಯಿಂದ ತೆರಿಗೆ ವಂಚನೆ: ಕೋಟ್ಯಂತರ ರೂಪಾಯಿ ವಹಿವಾಟಿಗೆ ಲೆಕ್ಕವೇ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶ್ರೀನಗರದಲ್ಲಿ ಅತಿ ದೊಡ್ಡ ಖಾಸಗಿ ‘ಮಲ್ಟಿ ಸ್ಪೆಷಿಯಾಲಿಟಿ’ ಆಸ್ಪತ್ರೆ ಸಮೂಹದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.

ಆಸ್ಪತ್ರೆ ಅಥವಾ ಕಂಪನಿಯ ಹೆಸರನ್ನು ಆದಾಯ ತೆರಿಗೆ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿಲ್ಲ. ಆದರೆ, ಶ್ರೀನಗರದ ಝೈನಕೋಟೆಯಲ್ಲಿರುವ ‘ನೂರಾ’ ಆಸ್ಪತ್ರೆ ನಿರ್ವಹಿಸುವ ಸಮೂಹ ಇದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ದಾಳಿ ಸಂದರ್ಭದಲ್ಲಿ ₹82.75 ಲಕ್ಷ ನಗದು ಮತ್ತು ₹35.7 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, ಇದೇ ಸಂದರ್ಭದಲ್ಲಿ ಪತ್ತೆಯಾದ ಬ್ಯಾಂಕ್‌ ಲಾಕರ್‌ಗಳನ್ನು ಸೀಲ್‌ ಮಾಡಲಾಗಿದೆ.

ಕಳೆದ ಶುಕ್ರವಾರದಿಂದ ವಿವಿಧೆಡೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಸಮೂಹ 100 ಹಾಸಿಗೆಗಳ ’ಮಲ್ಟಿ ಸ್ಪೆಷಿಯಾಲಿಟಿ’ ಆಸ್ಪತ್ರೆ, ರಿಯಲ್‌ ಎಸ್ಟೇಟ್‌ ಮತ್ತು ಮನೆಗೆ ಅಗತ್ಯವಿರುವ ದಿನನಿತ್ಯದ ವಸ್ತುಗಳ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದೆ.

2013–14ನೇ ಹಣಕಾಸು ವರ್ಷದಿಂದ ಈ ಸಮೂಹವು ₹100 ಕೋಟಿಗೂ ಹೆಚ್ಚು ಮೊತ್ತದ ಆಸ್ತಿ ವಹಿವಾಟು ನಡೆಸಿದೆ. ಆದರೆ, ಈ ವಹಿವಾಟಿಗೆ ಲೆಕ್ಕವೇ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

2015–16ರಿಂದ ಸುಮಾರು 10ರಿಂದ 12 ಕೋಟಿ ವಹಿವಾಟು ನಡೆಸಲಾಗಿದೆ ಎಂದು ಆಸ್ಪತ್ರೆ ತೋರಿಸಿದೆ. ಆದರೆ, ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಹಿವಾಟಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವಿವರಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು