ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ನಡಿಗೆಯಲ್ಲಿ 25 ಕಿ.ಮೀ ಕ್ರಮಿಸಿ, ಕುದುರೆ ಸಹಾಯಕನ ಶವ ತಂದ ಐಟಿಬಿಪಿ ಸಿಬ್ಬಂದಿ

Last Updated 2 ಸೆಪ್ಟೆಂಬರ್ 2020, 8:30 IST
ಅಕ್ಷರ ಗಾತ್ರ

ನವದೆಹಲಿ:ಇಂಡೊ– ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಥಳೀಯ ವ್ಯಕ್ತಿಯೊಬ್ಬನ ಮೃತ ದೇಹವನ್ನು ಹೊತ್ತುಕೊಂಡು ಉತ್ತರಾಖಂಡದ ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ಕಾಲ್ನಡಿಗೆ ಮೂಲಕ 25 ಕಿ.ಮೀ ಕ್ರಮಿಸಿ, ಆತನ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

ಪಿಥೋರ್‌ಗಡದ ಸುಯಾನಿ ಗ್ರಾಮದ ಬಳಿ ಕುದುರೆ ಸಹಾಯಕನ ಶವ ಪತ್ತೆಯಾಗಿತ್ತು.ಐಟಿಬಿಪಿಯ 14ನೇ ಬೆಟಾಲಿಯನ್‌ನಎಂಟು ಸಿಬ್ಬಂದಿಯ ತಂಡ ಶನಿವಾರ ಬೆಳಿಗ್ಗೆ 11.30ಕ್ಕೆ ಚಾರಣವನ್ನು ಪ್ರಾರಂಭಿಸಿ, ಸಂಜೆ 7.30ರ ಸುಮಾರಿಗೆ ಮುನ್ಸಾರಿ ಗ್ರಾಮವನ್ನು ತಲುಪಿದೆ.

ಪ್ರರ್ವತ ಪ್ರದೇಶಗಳ ಕಿರುದಾರಿಯ ಮೂಲಕ ಮೃತ ದೇಹವನ್ನುಸ್ಟ್ರೆಚರ್‌ನಲ್ಲಿ ಹೊತ್ತು, ಮಳೆಯ ನಡುವೆಯೂ 25 ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿದ್ದಾರೆ ಎಂದು ಐಟಿಬಿಪಿ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಐಟಿಬಿಪಿ ತಂಡ, ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು 15 ಗಂಟೆಗಳ ಕಾಲ ಕ್ರಮಿಸಿಪಿಥೋರ್‌ಗಡದಲ್ಲಿರುವ ಅವರ ಮನೆಗೆ ತಲುಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT