ಗುರುವಾರ , ಜೂನ್ 30, 2022
23 °C

ಮೂರು ಸಂಸ್ಥೆಗಳಿಗೆ ₹110 ಕೋಟಿ ನೆರವು ನೀಡಿದ ಟ್ವಿಟರ್‌ ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟ್ವಿಟರ್ ಸಿಇಒ ಜಾಕ್‌ ಡೊರ್ಸೆ ಅವರು ₹ 110 ಕೋಟಿ ಅನ್ನು ಆರ್‌ಎಸ್‌ಎಸ್‌ ಜೊತೆಗೆ ಸಂಪರ್ಕವುಳ್ಳ ಸಂಘಟನೆ ಸೇರಿದಂತೆ ಮೂರು ಸೇವಾ ಸಂಸ್ಥೆಗಳಿಗೆ ಕೋವಿಡ್ ಪರಿಹಾರ ಕಾರ್ಯಗಳಿಗೆ ಬಳಸಲು ಕೊಡುಗೆ ನೀಡಿದ್ದಾರೆ.

ಕೇರ್, ಏಡ್‌ಇಂಡಿಯಾ ಮತ್ತು ಸೇವಾಯುಎಸ್‌ಎ ಸಂಸ್ಥೆಗಳಿಗೆ ಒಟ್ಟಾಗಿ ₹ 110 ಕೋಟಿ ಕೊಡುಗೆ ನೀಡಲಾಗುವುದು ಎಂದು ಡೊರ್ಸೆ ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಸೇವಾ ಇಂಟರ್‌ನ್ಯಾಷನಲ್‌ ಸಂಸ್ಥೆಗೆ ಆರ್‌ಎಸ್‌ಎಸ್‌ ಜೊತೆಗೆ ಸಂಪರ್ಕವಿದೆ.

ಸೇವಾಗೆ ನೀಡಿದ ನೆರವನ್ನು ಭಾರತದಲ್ಲಿ ಕೋವಿಡ್ ಸ್ಥಿತಿ ಎದುರಿಸಲು ಆಮ್ಲಜನಕ ಕಾನ್ಸನ್‌ಟ್ರೇಟರ್ಸ್, ವೆಂಟಿಲೇಟರ್‌ಗಳು, ಬೈಪ್ಯಾಪ್‌, ಸಿಪ್ಯಾಪ್‌ ಖರೀದಿಸಲು ಬಳಕೆ ಮಾಡಲಾಗುವುದು ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು