ಶುಕ್ರವಾರ, ಜನವರಿ 27, 2023
21 °C
ಪ್ರಧಾನಿ ವಿರುದ್ಧ ವಾಗ್ದಂಡನೆ ಮಂಡಿಸಿದ ಆಸ್ಟ್ರೇಲಿಯಾ ಸಂಸತ್ತು

ಮಾರ್ರಿಸನ್‌ ತಮ್ಮ ಸ್ನೇಹಿತ ಮೋದಿಯಂದ ಸಲಹೆ ಪಡೆಯಬೇಕಿತ್ತು: ಜೈರಾಮ್‌ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ‘ಸಂಪುಟದ ಎಲ್ಲಾ ಸಚಿವರನ್ನು ಮರೆಮಾಚಿ ಪ್ರತಿಯೊಂದು ಸಚಿವಾಲಯದ ಉಸ್ತುವಾರಿ ಆಗುವುದು ಹೇಗೆ ಎಂಬ ಕುರಿತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರ್ರಿಸನ್‌ ಅವರು ತಮ್ಮ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಲಹೆ ಪಡೆಯಬಹುದಿತ್ತು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ಮಂಗಳವಾರ ವ್ಯಂಗ್ಯವಾಡಿದ್ದಾರೆ.

ಆಸ್ಟ್ರೇಲಿಯಾ ಸಂಪುಟದ ವಿವಿಧ ಐದು ಖಾತೆಗಳಿಗೆ ಸಚಿವರನ್ನಾಗಿ ತಮ್ಮನ್ನೇ ಗುಟ್ಟಾಗಿ ನೇಮಕ ಮಾಡಿಕೊಂಡಿದ್ದ ಕಾರಣ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರ್ರಿಸನ್‌ ಅವರು ಅಲ್ಲಿಯ ಸಂಸತ್ತಿನಲ್ಲಿ ವಾಗ್ದಂಡನೆಗೊಳಗಾಗಿದ್ದಾರೆ. 

2020ರಿಂದ 2021ರ ಅವಧಿಯಲ್ಲಿ ಸಂಪುಟದ ಐದು ಖಾತೆಗಳಿಗೆ ತಮ್ಮನ್ನೇ ಸಚಿವರನ್ನಾಗಿ ಮಾರ್ರಿಸನ್‌ ನೇಮಕ ಮಾಡಿಕೊಂಡಿದ್ದಾರೆ. ಅವರ ಈ ನಡೆಯು ಸರ್ಕಾರದ ಯಾವುದೇ ಸಚಿವರ ಗಮನಕ್ಕೂ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿಯ ಸಂಸತ್ತು ಮಾರ್ರಿಸನ್‌ ವಿರುದ್ಧ ವಾಗ್ದಂಡನೆ ಹೊರಡಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು