ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಅಲ್ಲಗಳೆದ ಆಡಳಿತ: ಶೋಪಿಯಾನ್‌ಗೆ ಬಾರದ ಪ್ರತಿಜ್ಞೆ ಮಾಡಿದ ಕಾಶ್ಮೀರಿ ಪಂಡಿತರು

Last Updated 27 ಅಕ್ಟೋಬರ್ 2022, 2:42 IST
ಅಕ್ಷರ ಗಾತ್ರ

ಶೋಪಿಯಾನ್‌: ಕಾಶ್ಮೀರಿ ಪಂಡಿತ ಪುರಾಣ್ ಕ್ರಿಶನ್ ಭಟ್ ಎಂಬುವವರು ಇತ್ತೀಚೆಗೆ ಭಯೋತ್ಪಾದಕರಿಂದ ಹತ್ಯೆಯಾದ ಹಿನ್ನೆಲೆಯಲ್ಲಿ ಭಯಭೀತರಾಗಿರುವ ಸ್ಥಳೀಯ 10 ಪಂಡಿತ ಕುಟುಂಬಗಳು ಶೋಪಿಯಾನ್ ಜಿಲ್ಲೆ ತೊರೆದು ಜಮ್ಮುವಿಗೆ ಸ್ಥಳಾಂತರಗೊಂಡಿವೆ.

ಆದರೆ, ಯಾವುದೇ ಪಂಡಿತ ಕುಟುಂಬಗಳು ಶೋಪಿಯಾನ್‌ ಜಿಲ್ಲೆ ತೊರೆದಿಲ್ಲ ಎನ್ನುವ ಮೂಲಕ ಸ್ಥಳೀಯ ಅಧಿಕಾರಿಗಳು ಸಮುದಾಯದಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಸೂಕ್ತ ಭದ್ರತೆಯನ್ನು ಕಾಶ್ಮೀರಿ ಪಂಡಿತರಿಗೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಅಕ್ಟೋಬರ್ 15 ರಂದು ಶೋಪಿಯಾನ್ ಜಿಲ್ಲೆಯ ಚೌಧರಿಕುಂಡ್ ಗ್ರಾಮದಲ್ಲಿ ಉಗ್ರರು ಕ್ರಿಶನ್‌ ಭಟ್‌ ಅವರ ಹತ್ಯೆ ಮಾಡಿದ್ದರು. ಹೀಗಾಗಿ 10 ಕುಟುಂಬಗಳ ಒಟ್ಟು 35 ಮಂದಿ ಶೋಪಿಯಾನ್‌ ಜಿಲ್ಲೆಯ ಚೌಧರಿಕುಂಡ್‌ ತೊರೆದು ಜಮ್ಮುವಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಕಾಶ್ಮೀರಿ ಪಂಡಿತರು ಶೋಪಿಯಾನ್‌ ಜಿಲ್ಲೆ ತೊರೆಯುತ್ತಿಲ್ಲ ಎಂದಿರುವ ಅಧಿಕಾರಿಗಳ ಹೇಳಿಕೆಯನ್ನು ಮೃತ ಕ್ರಿಶನ್‌ ಭಟ್‌ ಸೋದರ ಆಶ್ವನಿ ಕುಮಾರ್‌ ನಿರಾಕರಿಸಿದ್ದಾರೆ. ನಾನು ಅಲ್ಲಿಂದ (ಶೋಪಿಯಾನ್‌ನಿಂದ) ವಲಸೆ ಬಂದಿದ್ದೇನೆ. ಮತ್ತೆಂದೂ ಅಲ್ಲಿಗೆ ಹೋಗುವುದಿಲ್ಲ’ ಎಂದು ಹೇಳಿದ್ದಾರೆ.

‘ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಬದುಕಿರುವ ವರೆಗೆ ನನ್ನ ಮಕ್ಕಳನ್ನೂ ಅತ್ತ ಹೋಗಲು ಬಿಡುವುದಿಲ್ಲ. ನನಗೆ ಅಲ್ಲಿ 5 ಹೆಕ್ಟೇರ್‌ ಜಮೀನಿದೆ. ಅದೂ ಕೂಡ ನನಗೆ ಬೇಡ. ಸಾಯಲೆಂದು ಅಲ್ಲಿಗೆ ಹೋಗಲೇ? ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳು ಒದಗಿಸಿರುವ ಭದ್ರತೆ ಬಗ್ಗೆ ಪಂಡಿತ ಕುಟುಂಬಗಳು ಆಕ್ಷೇಪವೆತ್ತಿವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT