ಜಮ್ಮು/ನವದೆಹಲಿ: ಜಮ್ಮುವಿನಲ್ಲಿರುವ ವಾಯುನೆಲೆ ಮೇಲೆ ಇತ್ತೀಚೆಗೆ ಡ್ರೋನ್ ಮೂಲಕ ಹಾಕಿದ್ದ ಬಾಂಬ್‌ಗಳಲ್ಲಿ ‘ಪ್ರೆಶರ್ ಫ್ಯೂಸ್’ಗಳನ್ನು ಬಳಸಲಾಗಿದೆ. ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ಅಥವಾ ಲಷ್ಕರ್–ಎ–ತಯಬಾ ಸಂಘಟನೆಯ ಕೈವಾಡ ಇರುವುದನ್ನು ಇದು ತೋರಿಸುತ್ತದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

‘ಈ ರೀತಿಯ ಭಯೋತ್ಪಾದಕ ದಾಳಿ ನಡೆದಿರುವುದು ಇದೇ ಮೊದಲು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸಲು ಎಲ್‌ಇಟಿಗೆ ಐಎಸ್‌ಐ ನೆರವು ನೀಡಿರುವ ಸಾಧ್ಯತೆಗಳೇ ಹೆಚ್ಚು’ ಎಂದು ಇವೇ ಮೂಲಗಳು ಹೇಳಿವೆ.

‘ವಾಯುನೆಲೆಯ ಚಾವಣಿಯನ್ನು ಕೊರೆದಿದ್ದ ಐಇಡಿಯಲ್ಲಿ ಆರ್‌ಡಿಎಕ್ಸ್ ಹಾಗೂ ಇತರ ರಾಸಾಯನಿಕಗಳ ಮಿಶ್ರಣ ಇತ್ತು. ಈ ಸ್ಫೋಟಕಗಳ ಒಟ್ಟು ತೂಕ ಒಂದು ಕೆ.ಜಿ ಗಿಂತಲೂ ಕಡಿಮೆ ಇತ್ತು. ನೆಲದ ಮೇಲೆ ಬಿದ್ದಿದ್ದ ಐಇಡಿಯಲ್ಲಿ ಒಂದು ಕೆ.ಜಿಗಿಂತ ತುಸು ಹೆಚ್ಚು ತೂಕದ ಸ್ಫೋಟಕಗಳಿದ್ದವು’ ಎಂದು ಮೂಲಗಳು ಹೇಳಿವೆ.

ಟ್ಯಾಂಕ್ ಪ್ರತಿರೋಧಕ ಶಸ್ತ್ರಾಸ್ತ್ರಗಳಲ್ಲಿ, ಗಣಿಗಾರಿಕೆಯಲ್ಲಿ ಈ ‘ಪ್ರೆಶರ್ ಫ್ಯೂಸ್‘ಗಳನ್ನು ಬಳಸಲಾಗುತ್ತದೆ. ಈ ‘ಫ್ಯೂಸ್’ಗಳನ್ನು ಅಳವಡಿಸಿದ ಸ್ಫೋಟಕ ಸಾಧನ ರಭಸದಿಂದ ಕೆಳಕ್ಕೆ ಬಿದ್ದಾಗ, ಇಲ್ಲವೇ ಅವುಗಳ ಮೇಲೆ ವ್ಯಕ್ತಿ, ವಾಹನ ಹಾಯ್ದು ಹೋದಾಗ ಸ್ಫೋಟ ಸಂಭವಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.