ಗುರುವಾರ , ಮೇ 26, 2022
24 °C

ಜಮ್ಮು-ಕಾಶ್ಮೀರ: ಮುಂದುವರಿದ ಶೋಧ ಕಾರ್ಯಾಚರಣೆ, ಮೂವರು ವಶಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು ಮತ್ತು ಕಾಶ್ಮೀರದ ಗಡಿಯ ಪೂಂಛ್‌ ಮತ್ತು ರಾಜೌರಿ ಜಿಲ್ಲೆಗಳ ಅರಣ್ಯ ಭಾಗದಲ್ಲಿ ಸತತ ಏಳನೇ ದಿನವೂ ಶೋಧ ಕಾರ್ಯಾಚರಣೆಯು ಮುಂದುವರಿದಿದೆ. ಭದ್ರತಾ ಸಿಬ್ಬಂದಿಯು ತಾಯಿ–ಮಗ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದು, ತನಿಖೆಗೆ ಒಳಪಡಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಒಂದೆರಡು ಬಾರಿ ಈ ಭಾಗದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು. ಒಟ್ಟು ಒಂಭತ್ತು ಯೋಧರು ಹುತಾತ್ಮರಾಗಿದ್ದಾರೆ.

ಭಟ್ಟಾ ದುರಿಯನ್‌ ಅರಣ್ಯ ಭಾಗದಲ್ಲಿ ವಾಸವಿದ್ದ 45 ವರ್ಷದ ಮಹಿಳೆ, ಆಕೆಯ ಮಗ ಮತ್ತು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಇವರು, ಉಗ್ರರಿಗೆ ಪ್ರಯಾಣ ಸೇರಿದಂತೆ ಇತರೆ ನೆರವು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರು, ಸ್ವಯಂಪ್ರೇರಿತವಾಗಿ ನೆರವು ನೀಡಿದ್ದರೆ ಅಥವಾ ಉಗ್ರರ ಬೆದರಿಕೆಗೆ ಮಣಿದು ನೀಡಿದ್ದರೇ ಎಂಬ ಬಗ್ಗೆ ತನಿಖೆ ನಡೆದಿದೆ. ಉಗ್ರರು ಅಡಗಿದ್ದ ಭಾಗ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ದಟ್ಟ ಅರಣ್ಯದಿಂದ ಕೂಡಿದೆ. ಇದರಿಂದಾಗಿ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು