ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್: 4 ಸಾವಿರ ಮೆಗಾ ವಾಟ್‌ ಸೌರವಿದ್ಯುತ್ ಉತ್ಪಾದನೆ ಗುರಿ

Last Updated 5 ಜುಲೈ 2022, 13:42 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್ ರಾಜ್ಯವು 2026–27ರೊಳಗೆ ಸೌರ ಶಕ್ತಿಯಿಂದ ಒಟ್ಟು 4 ಸಾವಿರ ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಮಾಡಲಿದೆ. ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಮಂಗಳವಾರ ಬಿಡುಗಡೆ ಮಾಡಿರುವ ಸೌರಶಕ್ತಿ ನೀತಿ – 2022ರಲ್ಲಿ ಈ ಮಾಹಿತಿ ಇದೆ.

ಹೊಸ ನೀತಿಯ ಮೂಲಕ ಸೌರಶಕ್ತಿ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶವನ್ನೂ ರಾಜ್ಯವು ಹೊಂದಿದ್ದು, ಅವರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ಸೊರೇನ್ ಹೇಳಿದ್ದಾರೆ. ಏಕಗವಾಕ್ಷಿ ವ್ಯವಸ್ಥೆ ಸೇರಿದಂತೆ ಇತರ ಹಲವು ಸೌಲಭ್ಯಗಳು ಹೂಡಿಕೆದಾರರಿಗೆ ಸಿಗಲಿವೆ.

ಜಮೀನು ಬ್ಯಾಂಕ್ ಮೂಲಕ ಅವರಿಗೆ ಜಮೀನಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. 25 ಮೆಗಾ ವಾಟ್‌ ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರವಿದ್ಯುತ್ ಯೋಜನೆಗಳಿಗೆ ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯು ಅನುಮೋದನೆ ನೀಡುತ್ತದೆ ಎಂದು ನೀತಿಯಲ್ಲಿ ಹೇಳಲಾಗಿದೆ.

ಮನೆಯ ಛಾವಣಿ ಮೇಲೆ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ನಗರವಾಸಿಗಳಿಗೆ, ಅವರ ವಾರ್ಷಿಕ ಆದಾಯವು ₹ 3 ಲಕ್ಷಕ್ಕಿಂತ ಕಡಿಮೆ ಇದ್ದರೆ ಸೌರಫಲಕ ಅಳವಡಿಕೆ ವೆಚ್ಚದ ಗರಿಷ್ಠ ಶೇಕಡ 80ರಷ್ಟನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಎಂದು ಸೊರೇನ್ ಹೇಳಿದ್ದಾರೆ. ರಾಜ್ಯವು ಒಟ್ಟು ಒಂದು ಸಾವಿರ ಹಳ್ಳಿಗಳನ್ನು ಮಾದರಿ ಸೌರವಿದ್ಯುತ್ ಹಳ್ಳಿಗಳನ್ನಾಗಿ ಪರಿವರ್ತಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT