ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ನುಸುಳುಕೋರರ ಕುರಿತ ಹೇಳಿಕೆ: ಬಿಜೆಪಿಯಿಂದ ಕೋಮುದ್ವೇಷ ಎಂದ ಜೆಡಿಯು

Last Updated 10 ಸೆಪ್ಟೆಂಬರ್ 2022, 5:48 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಎರಡು ಜಿಲ್ಲೆಗಳ ಜನಸಂಖ್ಯೆಗೆ ಸಂಬಂಧಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ನೀಡಿರುವ ಹೇಳಿಕೆಗೆ ಆಡಳಿತಾರೂಢ ಜೆಡಿ(ಯು) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ನಾಯಕರು ಜನರಲ್ಲಿ ಕೋಮು ದ್ವೇಷ ಹರಡುತ್ತಿದ್ದಾರೆ ಎಂದು ಜೆಡಿಯು ಕಿಡಿ ಕಾರಿದೆ.

ಕಿಶನ್‌ಗಂಜ್ ಮತ್ತು ಅರೇರಿಯಾ ಜಿಲ್ಲೆಗಳ ಜನಸಂಖ್ಯಾ ಬೆಳವಣಿಗೆ ದರ ವಿಶ್ವದಲ್ಲೇ ಅತಿಹೆಚ್ಚಿನ ಪ್ರಮಾಣದಲ್ಲಿದೆ. ಇದಕ್ಕೆ ಬಾಂಗ್ಲಾದೇಶಿ ನುಸುಳುಕೋರರ ಒಳಹರಿವಿನ ಪ್ರಮಾಣ ಹೆಚ್ಚಿರುವುದೂ ಭಾಗಶಃ ಕಾರಣ ಎಂದು ಜೈಸ್ವಾಲ್ ಬುಧವಾರ ಅರೇರಿಯಾದಲ್ಲಿ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿ ಜೆಡಿಯು ನಾಯಕರಾದ ನೀರಜ್ ಕುಮಾರ್ ಹಾಗೂ ಅರವಿಂದ್ ನಿಶಾದ್ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

‘ಜೈಸ್ವಾಲ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ರಾಜ್ಯದ ಜನರಲ್ಲಿ ಕೋಮು ದ್ವೇಷ ಹರಡಲು ಯತ್ನಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 24ರಂದು ಬಿಹಾರಕ್ಕೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

‘ಜೈಸ್ವಾಲ್ ತಪ್ಪು ಮಾಹಿತಿ ನೀಡುತ್ತಿದ್ದಾರೆ. ದೇಶದ ಹಲವು ಜಿಲ್ಲೆಗಳ ಜನಸಂಖ್ಯಾ ಬೆಳವಣಿಗೆ ದರ ಕಿಶನ್‌ಗಂಜ್ ಮತ್ತು ಅರೇರಿಯಾಕ್ಕಿಂತ ಹೆಚ್ಚಿದೆ’ ಎಂದು ಜೆಡಿಯು ನಾಯಕರು ಪ್ರತಿಪಾದಿಸಿದ್ದಾರೆ.

2011ರ ಜನಗಣತಿ ಪ್ರಕಾರ ಕಿಶನ್‌ಗಂಜ್‌ನಲ್ಲಿ ಶೇ 67ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಅರೇರಿಯಾದಲ್ಲಿ ಶೇ 43ರಷ್ಟಿದೆ. ಇದು ಬಿಹಾರದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT