ಬುಧವಾರ, ಅಕ್ಟೋಬರ್ 28, 2020
29 °C

ಅತ್ಯಾಚಾರ ವಿರುದ್ಧ ಕ್ರಮಕ್ಕೆ ಮೋದಿಯನ್ನು ಆಗ್ರಹಿಸಿದ ಕೈಲಾಸ್‌ ಸತ್ಯಾರ್ಥಿ

ಪಿಟಿಐ Updated:

ಅಕ್ಷರ ಗಾತ್ರ : | |

Kailash Satyarthi

ನವದೆಹಲಿ: ‘ದೇಶದಾದ್ಯಂತ ಇಂದು ನಮ್ಮ ಪುತ್ರಿಯರ ಮೇಲೆ ಏನು ನಡೆಯುತ್ತಿದೆಯೋ ಅದು ‘ರಾಷ್ಟ್ರೀಯ ಅವಮಾನ’. ಮಹಿಳೆಯರು ಮತ್ತು ಮಕ್ಕಳ ನ್ಯಾಯದ ಬಿಕ್ಕಟ್ಟನ್ನು ಕೊನೆಗೊಳಿಸಬೇಕು’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಸ್‌ ಸತ್ಯಾರ್ಥಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಹಾಥರಸ್ ಅತ್ಯಾಚಾರ ಪ್ರಕರಣ ಮತ್ತು ದೇಶದಲ್ಲಿನ ಇತರ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅತ್ಯಾಚರದ ವಿರುದ್ಧ ಯುದ್ಧವನ್ನು ಪ್ರಧಾನಿಯವರೇ ಮುನ್ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 

‘ಅತ್ಯಾಚಾರದ ವಿರುದ್ಧ ಯುದ್ಧದಲ್ಲಿ ನಮ್ಮ ಪುತ್ರಿಯರಿಗೆ ನಿಮ್ಮ (ಪ್ರಧಾನಿ) ಬೆಂಬಲದ ಅಗತ್ಯವಿದೆ. ಇಡೀ ದೇಶವೇ ನಿಮ್ಮತ್ತ ನೋಡುತ್ತಿದೆ. ಅತ್ಯಾಚಾರದ ವಿರುದ್ಧದ ಹೋರಾಟದ ನೇತೃತ್ವವನ್ನು ನೀವೇ ವಹಿಸಿಕೊಳ್ಳಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ನಾವೆಲ್ಲ ನಿಮ್ಮ ಜತೆಗಿದ್ದೇವೆ’ ಎಂದು ಸತ್ಯಾರ್ಥಿ ಅವರು ಪ್ರಧಾನಿಯನ್ನು ಉದ್ದೇಶಿಸಿ ಹೇಳಿದ್ದಾರೆ.

ಹಿಂಸಾಚಾರದ ಈ ಮನಸ್ಥಿತಿಯ (ಅತ್ಯಾಚಾರ) ನಿರ್ಮೂಲನೆಗೆ ಚಳವಳಿಗೆ ಕರೆ ನೀಡಿರುವ ಅವರು, ಇದರ ಜತೆಗೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು