ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಕರ್ನಾಟಕ ಮಾದರಿ ಕೌಶಲ ಅಭಿವೃದ್ಧಿ ಯೋಜನೆ ಜಾರಿ

Last Updated 12 ಮೇ 2022, 11:32 IST
ಅಕ್ಷರ ಗಾತ್ರ

ಗುವಾಹಟಿ: ಕರ್ನಾಟಕದಲ್ಲಿ ಜಾರಿಯಲ್ಲಿರುವ ಕೌಶಲ ಅಭಿವೃದ್ಧಿ ಯೋಜನೆ ಮಾದರಿಯಲ್ಲೇ ಯುವಜನರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಯೋಜನೆಯನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೊಳಿಸಲಿದೆ.

ಯುವಜನರಿಗೆ ತರಬೇತಿ ಮತ್ತು ಮಾನವಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರವು, ಟಾಟಾ ಟೆಕ್ನಾಲಜಿಸ್ ಲಿಮಿಟೆಡ್‌ ಕಂಪನಿಯ ಜೊತೆಗೆ ಗುರುವಾರ ಒಡಂಬಡಿಕೆ ಮಾಡಿಕೊಂಡಿತು.

ಒಪ್ಪಂದದನ್ವಯ ಟಾಟಾ ಟೆಕ್ನಾಲಜಿಸ್ ಸಂಸ್ಥೆಯು ರಾಜ್ಯದಲ್ಲಿ 34 ಪಾಲಿಟೆಕ್ನಿಕ್‌ಗಳು, 43 ಐಟಿಐಗಳನ್ನು ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಗಳಾಗಿ ಅಭಿವೃದ್ಧಿಗೊಳಿಸಲು ₹ 2,390 ಕೋಟಿ ಹೂಡಿಕೆ ಮಾಡಲಿದೆ.

ಒಪ್ಪಂದಕ್ಕೆ ಸಹಿಹಾಕುವ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ಕರ್ನಾಟಕದಲ್ಲಿ ಇಂಥ ಯೋಜನೆ ಜಾರಿಯಲ್ಲಿದೆ. ಅಲ್ಲಿನ ಮುಖ್ಯಮಂತ್ರಿ ಇದೊಂದು ನವೀನ ಕಾರ್ಯಕ್ರಮ ಎಂದಿದ್ದಾರೆ. ಅಸ್ಸಾಂನಲ್ಲಿಯೂ ಯುವಜನರ ಕೌಶಲ ಅಭಿವೃದ್ಧಿಗೆ ಇದು ಸೂಕ್ತ ಯೋಜನೆ ಎಂದು ಭಾವಿಸಿದ್ದೇನೆ. ಟಾಟಾ ಟೆಕ್ನಾಲಜಿಸ್‌ ಜೊತೆಗೆ ಚರ್ಚಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT