ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಭಾರತ್‌: ಕರ್ನಾಟಕಕ್ಕೆ 20ನೇ ಸ್ಥಾನ- ಸ್ವಚ್ಛ ಜಿಲ್ಲೆಯ ಮುಕುಟ ಉಡುಪಿಗೆ

ರಾಜ್ಯದಲ್ಲಿ ಸ್ವಚ್ಛ ಜಿಲ್ಲೆಯ ಮುಕುಟ ಉಡುಪಿಗೆ
Last Updated 2 ಅಕ್ಟೋಬರ್ 2022, 21:45 IST
ಅಕ್ಷರ ಗಾತ್ರ

ನವದೆಹಲಿ:ಸ್ವಚ್ಛ ಭಾರತ್ ಮಿಷನ್ ಅಡಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುವ ಕೇಂದ್ರದ ವಾರ್ಷಿಕ ಸ್ವಚ್ಛತೆಯ ಸಮೀಕ್ಷೆ–2022ರಲ್ಲಿ ತೆಲಂಗಾಣ ರಾಜ್ಯ ಅಗ್ರಸ್ಥಾನ ಮತ್ತು ಹರಿಯಾಣ ದ್ವಿತೀಯ ಸ್ಥಾನ ‍ಪಡೆದಿದ್ದು, ಕರ್ನಾಟಕಕ್ಕೆ20ನೇ ಸ್ಥಾನ ದೊರಕಿದೆ.

ಸಮೀಕ್ಷೆಯಲ್ಲಿ 1,000 ಅಂಕಗಳಿಗೆ ತೆಲಂಗಾಣ 971 ಮತ್ತು ಕರ್ನಾಟಕ 635 ಅಂಕಗಳನ್ನು ಪಡೆದಿವೆ. ಇನ್ನು ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆ ದೇಶದಲ್ಲೇ ಅತ್ಯಂತ ಸ್ವಚ್ಛ ಜಿಲ್ಲೆಯೆನಿಸಿ, ಮೊದಲ ಸ್ಥಾನ ಸಂಪಾದಿಸಿದೆ. ಇನ್ನು ತೆಲಂಗಾಣದ ಜಗ್ತಿಯಲ್‌ ಮತ್ತು ನಿಜಾಮಾಬಾದ್‌ ಜಿಲ್ಲೆಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಿಟ್ಟಿಸಿವೆ.ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಜಿಲ್ಲೆಗಳ ಪೈಕಿ 129ನೇ ಸ್ಥಾನದಲ್ಲಿರುವ ಉಡುಪಿ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದಿದೆ.

ಜಲಶಕ್ತಿ ಸಚಿವಾಲಯದ ಕುಡಿ ಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗ್ರಾಮೀಣ ಪ್ರದೇಶಗಳ ಸ್ವಚ್ಛತೆ ಸಮೀಕ್ಷೆ ನಡೆಸಿ, ಶ್ರೇಯಾಂಕ ನೀಡಿದೆ. ದೇಶದಾದ್ಯಂತ 17,559 ಗ್ರಾಮ, 709 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದೆ. ಕರ್ನಾಟಕದಲ್ಲಿ 30 ಜಿಲ್ಲೆಗಳು ಮತ್ತು 753 ಗ್ರಾಮಗಳನ್ನು ಒಳಗೊಂಡು ಸಮೀಕ್ಷೆ ನಡೆದಿದೆ.ಸಮೀಕ್ಷೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಮುಟ್ಟಿನ ನೈರ್ಮಲ್ಯ ನಿರ್ವಹಣೆ, ಮುಟ್ಟಿನ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಬಯಲು ಮಲವಿಸರ್ಜನೆ ಮುಕ್ತಹಳ್ಳಿಗಳನ್ನುಕೇಂದ್ರೀಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT