ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕಣಿವೆಯಲ್ಲಿ ಋತುವಿನ ಮೊದಲ ಹಿಮದಟ್ಚಣೆ

Last Updated 23 ನವೆಂಬರ್ 2020, 8:42 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದ ಹೆಚ್ಚಿನ ಬಯಲು ಪ್ರದೇಶಗಳಲ್ಲಿ ಸೋಮವಾರ ಈ ಋತುವಿನ ಮೊದಲ ಹಿಮ ಕಾಣಿಸಿಕೊಂಡಿದೆ. ಹಿಮ ದಟ್ಟವಾಗಿ ಆವರಿಸಿಕೊಂಡಿರುವ ಕಾರಣ ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಶ್ರೀನಗರ–ಲೇಹ್‌ ರಸ್ತೆ ಮುಚ್ಚಲ್ಪಟ್ಟಿದೆ.

ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರ, ಶ್ರೀನಗರ–ಲೇಹ್‌ ಮಾರ್ಗದ ಸೊನ್ಮಾರ್ಗ್ -ಜೋಜಿಲಾ ಅಕ್ಸಿಸ್‌ ಭಾಗದಲ್ಲಿಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಅಲ್ಲದೆ ಅಧಿಕಾರಿಗಳು, ಸ್ಥಳೀಯರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಸೊನ್ಮಾರ್ಗ್ -ಜೋಜಿಲಾ ಅಕ್ಸಿಸ್‌ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಸೋಮವಾರ ಹಿಮ ಆವಸಿರುವುದು ವರದಿಯಾಗಿದೆ. ಉತ್ತರ ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿ ಭಾನುವಾರ ರಾತ್ರಿ ನಾಲ್ಕು ಇಂಚಿನಷ್ಟು, ಪಹಲ್ಗಾಮ್‌ನಲ್ಲಿ 10 ಸೆ.ಮೀ ನಷ್ಟು ಹಿಮ ಆವರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನವೆಂಬರ್‌ 24–25 ತನಕ ಪೀರ್‌ ಪಂಜಲ್‌, ಗುಲ್‌ಮಾರ್ಗ್,ರಂಬಾನ್‌–ಬನಿಹಾಲ್‌. ಸೋಪಿಯಾನ್‌, ಪೂಂಚ್‌–ರಾಜೌರಿ,ಝೋಜಿಲಾದಲ್ಲಿ ಉತ್ತಮ ಪ್ರಮಾಣದಲ್ಲಿ ಹಿಮ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಿಮಪಾತದಿಂದಾಗಿ ಶ್ರೀನಗರ–ಲೇಹ್‌ ರಸ್ತೆ, ಜಮ್ಮುಗೆ ಸಂಪರ್ಕ ಕಲ್ಪಿಸುವ ಮೊಘಲ್‌ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಸಂಚಾರ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT