ಮಂಗಳವಾರ, ಮಾರ್ಚ್ 9, 2021
31 °C

ಅಮೆರಿಕದಲ್ಲಿ ಅಪ್ರಾಪ್ತರ ಶೋಷಣೆ: ಕಾಶ್ಮೀರ ನಿವಾಸಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪತ್ನಿಯ ಮೂಲಕ ಅಮೆರಿಕದಲ್ಲಿ ಅಪ್ರಾಪ್ತ ವಯಸ್ಕರನ್ನು ಶೋಷಿಸುತ್ತಿದ್ದ ಕಾಶ್ಮೀರದ ವ್ಯಕ್ತಿಯೊಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮಂಗಳವಾರ ಬಂಧಿಸಿದೆ.

‘ಆರೋಪಿಯು ಹಣದ ಆಸೆಗಾಗಿ ಡಾರ್ಕ್‌ ವೆಬ್‌ನಲ್ಲಿ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ. ಅಮೆರಿಕದಲ್ಲಿರುವ ಅನೇಕ ಅಪ್ರಾಪ್ತ ವಯಸ್ಕರೊಂದಿಗೆ ನೇರ ಸಂಪರ್ಕದಲ್ಲೂ ಇದ್ದ. ಭಾರತದಲ್ಲಿ ನೆಲೆಸಿರುವ ವಂಚಕರ ಪಡೆಯು ಆನ್‌ಲೈನ್‌ ಮೂಲಕ ಅಮೆರಿಕದಲ್ಲಿರುವ ಅಪ್ರಾಪ್ತರನ್ನು ಶೋಷಿಸುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಕುರಿತು ತನಿಖೆ ನಡೆಸುತ್ತಿರುವಾಗ ಕಾಶ್ಮೀರದ ವ್ಯಕ್ತಿಯ ಕೃತ್ಯ ಬಯಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. 

‘ಆರೋಪಿಯ ಪತ್ನಿಯು ವಾಷಿಂಗ್ಟನ್‌ನಲ್ಲಿ ನೆಲೆಸಿದ್ದಾರೆ. ಈತನ ನಿರ್ದೇಶನದ ಮೇರೆಗೆ ಅಪ್ರಾಪ್ತರ ವಿಡಿಯೊ ಚಿತ್ರೀಕರಿಸುತ್ತಿದ್ದ ಆಕೆ ಬಳಿಕ ಆನ್‌ಲೈನ್‌ ಮೂಲಕ ಅವುಗಳನ್ನು ಆರೋಪಿಗೆ ಕಳುಹಿಸುತ್ತಿದ್ದಳು’ ಎಂದೂ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು