ಡಾಲರ್ ಸಾಗಣೆ ಪ್ರಕರಣ: ಸ್ಪೀಕರ್ ಸಹಾಯಕನ ವಿಚಾರಣೆ
ಕೊಚ್ಚಿ: ಕೇರಳದಲ್ಲಿ ನಡೆದ ಡಾಲರ್ ಕಳ್ಳಸಾಗಣೆ ಪ್ರಕರಣದ ಸಂಬಂಧ ಶುಕ್ರವಾರ ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರ ಖಾಸಗಿ ಸಹಾಯಕ ಕಾರ್ಯದರ್ಶಿ ಕಸ್ಟಮ್ಸ್ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.
ಕಸ್ಟಮ್ಸ್ ಇಲಾಖೆಯು ಈ ಸಂಬಂಧ ಕೆ.ಅಯ್ಯಪ್ಪನ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಸ್ಪೀಕರ್ ಅವರ ನಿತ್ಯದ ಕಾರ್ಯಕ್ರಮ ನಿಗದಿಪಡಿಸುವಲ್ಲಿ ಅಯ್ಯಪ್ಪನ್ ಮುಖ್ಯ ಪಾತ್ರ ವಹಿಸುತ್ತಿದ್ದರು.
ಕಸ್ಟಮ್ಸ್ ಇಲಾಖೆಯ ಮೂಲಗಳ ಪ್ರಕಾರ, ಡಾಲರ್ ಕಳ್ಳಸಾಗಣೆ ಪ್ರಕಣದಲ್ಲಿ ಕೆಲ ಪ್ರಮುಖರು ಭಾಗಿಯಾಗಿದ್ದಾರೆ ಎಂಬ ಕುರಿತು ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಅಯ್ಯಪ್ಪನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.