ಮಂಗಳವಾರ, ಮಾರ್ಚ್ 21, 2023
20 °C

'ನ್ಯೂಯಾರ್ಕ್ ಟೈಮ್ಸ್' ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳಕ್ಕೆ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ನ್ಯೂಯಾರ್ಕ್ ಟೈಮ್ಸ್  ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಕೇರಳ ಸ್ಥಾನ ಪಡೆದುಕೊಂಡಿದೆ.

ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳವು 13ನೇ ಸ್ಥಾನದಲ್ಲಿದೆ ಮತ್ತು ಭಾರತದಿಂದ ಜಾಗ ಪಡೆದ ಏಕೈಕ ಪ್ರವಾಸಿ ತಾಣವಾಗಿದೆ. ಕೇರಳವು ತನ್ನ ಕಡಲತೀರಗಳು, ಹಿನ್ನೀರಿನ ಸೊಬಗು, ಪಾಕಪದ್ಧತಿ ಮತ್ತು ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಹೆಸರುವಾಸಿಯಾದ ದಕ್ಷಿಣ ಭಾರತದ ರಾಜ್ಯ ಎಂದು ವರದಿ ವಿವರಿಸಿದೆ. ಕುಮಾರಕೊಮ್ ಮತ್ತು ಮರವಂತುರುತ್ತು ಸೇರಿದಂತೆ ರಾಜ್ಯದ ಅತ್ಯುತ್ತಮ ಪ್ರವಾಸೋದ್ಯಮ ತಾಣಗಳ ಬಗ್ಗೆಯೂ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "2023 ರಲ್ಲಿ ಭೇಟಿ ನೀಡುವ 52 ಸ್ಥಳಗಳಲ್ಲಿ ಕೇರಳವನ್ನು @nytimesಆಯ್ಕೆ ಮಾಡಿದೆ. ಪ್ರವಾಸಿಗರು ಕೇರಳದ ಶ್ರೀಮಂತ ಸಂಸ್ಕೃತಿ ಮತ್ತು ಪ್ರಾಕೃತಿಕ ಸೊಬಗು ಆನಂದಿಸಲು ಅನುವು ಮಾಡಿಕೊಡುವ ಸಮುದಾಯ ಪ್ರವಾಸೋದ್ಯಮಕ್ಕೆ ನಮ್ಮ ಅನುಕರಣೀಯ ವಿಧಾನವನ್ನು ಶ್ಲಾಘಿಸಲಾಗಿದೆ. ಕೇರಳ ಪ್ರವಾಸೋದ್ಯಕ್ಕೆ ಮತ್ತೊಂದು ಗರಿ" ಎಂದಿದ್ದಾರೆ.

ತಾಳೆ ಮರದ ಆಕರ್ಷಣೆ, ವಾರ್ಷಿಕ ಉತ್ಸವದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವಿಕೆ ಮತ್ತು ಹಳ್ಳಿಯ ಜೀವನದ ಸುಸ್ಥಿರ ರುಚಿಯನ್ನು ಪಡೆಯಲು ಕೇರಳ ಅತ್ಯುತ್ತಮ ತಾಣ ಎಂದು ಪತ್ರಿಕೆ ಬಣ್ಣಿಸಿದೆ.

ಪಟ್ಟಿಯಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದೆ, ನಂತರ ಜಪಾನ್‌ನ ಮೊರಿಯೊಕಾ, ಅಮೆರಿಕದ ಸ್ಮಾರಕ ಕಣಿವೆ ನವಾಜೊ ಟ್ರೈಬಲ್ ಪಾರ್ಕ್, ಸ್ಕಾಟ್‌ಲ್ಯಾಂಡ್‌ನ ಕಿಲ್ಮಾರ್ಟಿನ್ ಗ್ಲೆನ್ ಮತ್ತು ನ್ಯೂಜಿಲೆಂಡ್‌ನ ಆಕ್ಲೆಂಡ್‌ಗಳು ಅಗ್ರಸ್ಥಾನದಲ್ಲಿವೆ.

ಕ್ಯಾಲಿಫೋರ್ನಿಯಾದ ಪಾಮ್ ಸ್ಪ್ರಿಂಗ್ಸ್, ಆಸ್ಟ್ರೇಲಿಯಾದ ಕಾಂಗರೂ ದ್ವೀಪ, ಅಲ್ಬೇನಿಯಾದ ವ್ಜೋಸಾ ನದಿ, ಘಾನಾದ ಅಕ್ರಾ, ನಾರ್ವೆಯ ಟ್ರೊಮ್ಸೊ, ಬ್ರೆಜಿಲ್‌ನ ಲೆನೋಯಿಸ್ ಮರನ್‌ಹೆನ್ಸ್ ರಾಷ್ಟ್ರೀಯ ಉದ್ಯಾನವನ, ಭೂತಾನ್, ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಮತ್ತು ಟಕ್ಸನ್ (ಅರಿಜೋನಾ) ಸಹ ಪಟ್ಟಿಯಲ್ಲಿ ಜಾಗ ಪಡೆದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು