ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾನೆಟ್‌ ಕಚೇರಿಗಳಿಗೆ ಭದ್ರತೆ ಹೆಚ್ಚಿಸಿ: ಕೇರಳ ಹೈಕೋರ್ಟ್‌

Last Updated 8 ಮಾರ್ಚ್ 2023, 13:56 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ‘ತಿರುವನಂತಪುರ, ಕೊಚ್ಚಿ, ಕೊಯಿಕ್ಕೋಡ್‌ ಹಾಗೂ ಕಣ್ಣೂರಿನಲ್ಲಿರುವ ‘ಏಷ್ಯಾನೆಟ್‌’ ವಾಹಿನಿಯ ಕಚೇರಿಗಳಿಗೆ ಬಿಗಿ ಭದ್ರತೆ ನೀಡಬೇಕು’ ಎಂದು ಕೇರಳ ಹೈಕೋರ್ಟ್‌ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

‘ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಕಾರ್ಯಕರ್ತರು ನಮ್ಮ ಮೇಲೆ ಇನ್ನಷ್ಟು ಬೆದರಿಕೆ ಒಡ್ಡಬಹುದು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಬಹುದು’ ಎಂದು ಆರೋಪಿಸಿ ವಾಹಿನಿಯು ಹೈಕೊರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನ್ಯಾಯಮೂರ್ತಿ ಎನ್‌.ನಾಗರೇಶ್‌ ಅವರು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದರು.

‘ಮಾರ್ಚ್‌ 3ರಂದು ಎಸ್‌ಎಫ್‌ಐ ಕಾರ್ಯಕರ್ತರು ಕೊಚ್ಚಿಯಲ್ಲಿರುವ ನಮ್ಮ ಕಚೇರಿಗೆ ಬಲವಂತವಾಗಿ ನುಗ್ಗಿ, ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ, ಒಂದು ಗಂಟೆಗಳ ಕಾಲ ನಮ್ಮ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಮಾಧ್ಯಮ ಕಚೇರಿಯೊಂದಕ್ಕೆ ಬಲವಂತವಾಗಿ ನುಗ್ಗಿರುವುದು ತಪ್ಪು ಮಾತ್ರವಲ್ಲ, ಇದು ಮಾಧ್ಯಮ ಸ್ವಾತಂತ್ರದ ಮೇಲೆ ನಡೆಸಿದ ದಾಳಿ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT