ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಭೂಮಿ ಪ್ರಕರಣ: ಶಾಹಿ ಈದ್ಗಾದಲ್ಲಿ 'ಅಭಿಷೇಕ'ಕ್ಕೆ ಅನುಮತಿ ಕೋರಿ ಅರ್ಜಿ

Last Updated 19 ಮೇ 2022, 1:32 IST
ಅಕ್ಷರ ಗಾತ್ರ

ಮಥುರಾ: ಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿದಾರ ಬುಧವಾರ ಶಾಹಿ ಈದ್ಗಾ ಜಮಾ ಮಸೀದಿಯ ಒಳಗೆ ಶ್ರೀ ಕೃಷ್ಣ ದೇವಸ್ಥಾನದ ಕಟ್ಟಡವಿದ್ದು, ಅಲ್ಲಿ ಬಾಲ ಗೋಪಾಲನಿಗೆ ಅಭಿಷೇಕ ನಡೆಸಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಅಭಿಷೇಕಕ್ಕೆ ಅನುಮತಿ ಕೋರಿಸ್ಥಳೀಯ ಕೋರ್ಟ್‌ಗೆಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಖಜಾಂಚಿ ದಿನೇಶ್‌ ಕೌಶಿಕ್‌ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ಸಂಜಯ್‌ ಗೌರ್‌ ತಿಳಿಸಿದ್ದಾರೆ.

ಅರ್ಜಿಯ ವಿಚಾರಣೆಗೆ ಸಮ್ಮತಿಸಿರುವ ಕೋರ್ಟ್‌ ಜುಲೈ 1ಕ್ಕೆ ಕೈಗೆತ್ತಿಕೊಳ್ಳಲಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲವು ಹಿಂದೂ ಕಾರ್ಯಕರ್ತರು ಜಮಾ ಮಸೀದಿಯ ಒಳಗಿದೆ ಎನ್ನಲಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಕಟ್ಟಡದಲ್ಲಿ ಬಾಲ ಗೋಪಾಲನಿಗೆ ಜಲಾಭಿಷೇಕ ಮಾಡಲು ಯೋಜನೆ ರೂಪಿಸಿದ್ದರು.

ಶ್ರೀ ಕೃಷ್ಣ ಜನ್ಮಸ್ಥಳದಲ್ಲೇ ಮಸೀದಿ ನಿರ್ಮಿಸಲಾಗಿದೆ, ಮಸೀದಿಯನ್ನು ತೆರವು ಮಾಡಬೇಕು ಎಂದು ಕೆಲವು ಹಿಂದೂ ಮುಖಂಡರು ಹಲವು ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT