ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸುರಕ್ಷತಾ ಮಂಡಳಿಗೆ ಸುಬ್ರಹ್ಮಣ್ಯನ್ ನೇಮಕ

Last Updated 4 ಫೆಬ್ರುವರಿ 2021, 15:24 IST
ಅಕ್ಷರ ಗಾತ್ರ

ನವದೆಹಲಿ: ಖ್ಯಾತ ಎಂಜಿನಿಯರ್‌ ಹಾಗೂಎಲ್ ಅಂಡ್ ಟಿ ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸುಬ್ರಹ್ಮಣ್ಯನ್ ಅವರನ್ನು ರಾಷ್ಟ್ರೀಯ ಸುರಕ್ಷತಾ ಮಂಡಳಿಯ (ಎನ್‌ಎಸ್‌ಸಿ) ಅಧ್ಯಕ್ಷರನ್ನಾಗಿ ಕಾರ್ಮಿಕ ಸಚಿವಾಲಯ ನೇಮಕ ಮಾಡಿದೆ.

ಇವರ ಅಧಿಕಾರಾವಧಿ ಮೂರು ವರ್ಷವಿರಲಿದೆ. ದೇಶದ ಅತಿದೊಡ್ಡ ನಿರ್ಮಾಣ ಸಂಸ್ಥೆ ಮತ್ತು ವಿಶ್ವದಲ್ಲಿ 14ನೇ ಸ್ಥಾನದಲ್ಲಿರುವ ಎಲ್ ಅಂಡ್‌ ಟಿಯ ಮೂಲಸೌಕರ್ಯ ವ್ಯವಹಾರವನ್ನು ಹಲವು ವರ್ಷಗಳಿಂದ ಮುನ್ನಡೆಸಿದ ಅನುಭವಿಸುಬ್ರಹ್ಮಣ್ಯನ್ ಅವರು .

ಬೃಹತ್‌ ಎಂಜಿನಿಯರಿಂಗ್, ರಕ್ಷಣಾ ಸಲಕರಣೆಗಳು ಮತ್ತು ಹಡಗು ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ದೇಶದ ಅತಿದೊಡ್ಡ ಎಂಜಿನಿಯರಿಂಗ್ ಕಂಪನಿಗಳಲ್ಲಿ ಎಲ್ ಅಂಡ್ ಟಿ ಕೂಡ ಒಂದೆನಿಸಿದೆ.

ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಪರಿಸ್ಥಿತಿಗಳ ಸಂಹಿತೆ 2020 (ಒಎಸ್‌ಎಚ್‌ ಕೋಡ್‌ 2020) ಅಡಿ ಕೆಲಸದ ಸ್ಥಳದಲ್ಲಿ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುವ ರಾಷ್ಟ್ರೀಯ ಸುರಕ್ಷತಾ ಮಂಡಳಿಗೆ ಸುಬ್ರಹ್ಮಣ್ಯನ್ ಅವರು ತಮಗಿರುವ ಅನುಭವದಿಂದ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT