ಭಾನುವಾರ, ಜನವರಿ 17, 2021
16 °C

ಹಿಮಾಚಲ ಪ್ರದೇಶ:ಭೂಕುಸಿತ, ಸಂಚಾರ ಅಸ್ತವ್ಯಸ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಿನ್ನೌರ್, ಹಿಮಾಚಲ ಪ್ರದೇಶ: ಇಲ್ಲಿನ ಕಿನ್ನೌರ್–ಕಾಜಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕೊ ಸಮೀಪ ಸೋಮವಾರ ಭೂಕುಸಿತವಾಗಿದೆ. ಸಂಚಾರ ಸ್ಥಗಿತವಾಗಿದ್ದು, ನೂರಾರು ಜನರು ಸಿಕ್ಕಿಬಿದ್ದಿದ್ದಾರೆ.

ಈ ರಸ್ತೆಯು ಲಾಹೌಲ್‌–ಸ್ಪಿತಿ ಜಿಲ್ಲೆಗೆ ಸಂಪರ್ಕ ಒದಗಿಸಲಿದ್ದು, ವಿವಿಧ ಗ್ರಾಮಗಳು ಭೂಕುಸಿತ ಮತ್ತು ಹಿಮಪಾತದಿಂದಾಗಿ ಇತರೆ ಭಾಗದೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಭೂಕುಸಿತ ಸ್ಥಳದಿಂದ ಎರಡೂ ಬದಿ ರಸ್ತೆಯಲ್ಲಿ ಅಸಂಖ್ಯ ವಾಹನಗಳು ಸಾಲುಗಟ್ಟಿವೆ. ಗಡಿ ರಸ್ತೆ ಸಂಘಟನೆಯ (ಬಿಆರ್‌ಒ) ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ತರಲು ಯತ್ನಿಸುತ್ತಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು