ಮಂಗಳವಾರ, ಆಗಸ್ಟ್ 9, 2022
23 °C
‘ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುವವರಿಗೆ ಒಡ್ಡಿರುವ ಬೆದರಿಕೆ’

ತೀಸ್ತಾ ಬಂಧನ ಪ್ರಜಾಸತ್ತಾತ್ಮಕತೆ ಬಯಸುವವರಿಗೆ ಒಡ್ಡಿದ ಬೆದರಿಕೆ: ಎಡ ಪಕ್ಷಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‍ವಾಡ್ ಅವರ ಬಂಧನವನ್ನು ಎಡ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ–ಎಂ,  ತೀಸ್ತಾ ಅವರ ಬಂಧನವು ಪ್ರಜಾಸತ್ತಾತ್ಮಕ ವ್ಯವಸ್ಥೆ ಬಯಸುವವರಿಗೆ ಒಡ್ಡಿರುವ ಬೆದರಿಕೆ ಎಂದು ಆರೋಪಿಸಿದೆ. ಬಂಧನವು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಹಕ್ಕುಗಳನ್ನು ಕಸಿಯುವ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತೀಸ್ತಾ ಅವರನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಶನಿವಾರ ಮುಂಬೈನಲ್ಲಿ ಬಂಧಿಸಿತ್ತು. ಬಳಿಕ ನಕಲಿ ಸಹಿ, ಕ್ರಿಮಿನಲ್ ಪಿತೂರಿ ಮತ್ತಿತರ ಪ್ರಕರಣದಲ್ಲಿ ಭಾನುವಾರ ಅಹಮದಾಬಾದ್‌ ಕ್ರೈಂ ಬ್ರಾಂಚ್‌ಗೆ ಅವರನ್ನು ಹಸ್ತಾಂತರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು